ಇಂದು ಸನ್ ರೈಸರ್ಸ್ ಹೈದರಾಬಾದ್-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

Update: 2020-09-28 19:06 GMT

ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡ ಮಂಗಳವಾರ ಶೇಖ್ ಝಾಹಿದ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್‌ನ 11ನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆೆ.

 ಡೆಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಆಡಿರುವ ಎರಡು ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಎರಡು ಗೆಲುವಿನ ಹಿನ್ನೆಲೆಯಲ್ಲಿ ತಂಡದ ಆತ್ಮವಿಶ್ವಾಸ ಜಾಸ್ತಿಯಾಗಿದೆ.

    ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್‌ನ್ನು ರೋಮಾಂಚಕ ಸೂಪರ್ ಓವರ್‌ನಲ್ಲಿ ಮಣಿಸಿ ಅಭಿಯಾನ ಆರಂಭಿಸಿದ್ದ ಬಳಿಕ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿತ್ತು.

  ಡೇವಿಡ್ ವಾರ್ನರ್ ನೇತೃತ್ವದ ಹೈದರಾಬಾದ್ ತಂಡ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ತಯಾರಿ ನಡೆಸುತ್ತಿದೆ. ಮೊದಲ ಪಂದ್ಯದಲ್ಲಿ ಗೆಲುವಿಗೆ 164 ರನ್ ಗಳಿಸಬೇಕಿದ್ದ ಹೈದರಾಬಾದ್ ತಂಡಕ್ಕೆ ಓಪನರ್ ಜಾನಿ ಬೈರ್‌ಸ್ಟೋವ್ (61) ಮತ್ತು ಮನೀಶ್ ಪಾಂಡೆ (34) ಉತ್ತಮ ಕೊಡುಗೆ ನೀಡಿ ಗೆಲುವಿನ ಭರವಸೆ ಮೂಡಿಸಿದ್ದರೂ, ಸಹ ಆಟಗಾರರ ವೈಫಲ್ಯದಿಂದಾಗಿ ಗೆಲುವಿನ ದಡ ದಾಟಲು ವಿಫಲವಾಯಿತು.

 ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯದಿಂದಾಗಿ ಸೋಲನುಭವಿಸಿತು. ಡೆಲ್ಲಿ ತಂಡದ ಪರ ದಕ್ಷಿಣ ಆಫ್ರಿಕಾದ ವೇಗದ ಜೋಡಿ ಕಾಗಿಸೊ ರಬಡಾ ಮತ್ತು ಅನ್ರಿಚ್ ನಾರ್ಟ್ಜೆ ಹೊಸ ಚೆಂಡಿನೊಂದಿಗೆ ಮಿಂಚುತ್ತಿದ್ದರೆ, ಸ್ಪಿನ್ನರ್‌ಗಳಾದ ಆಕ್ಷರ್ ಪಟೇಲ್ ಮತ್ತು ಅಮಿತ್ ಮಿಶ್ರಾ ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಅಶ್ವಿನ್ ಗಾಯಗೊಂಡಿದ್ದು, ಸನ್‌ರೈಸರ್ಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.

ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಇನ್ನೂ ತಮ್ಮ ಲಯವನ್ನು ಕಂಡುಕೊಂಡಿಲ್ಲ, ಮೊದಲ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆಯದೆ ಕೈ ಸುಟ್ಟುಕೊಂಡಿದ್ದರು. ಸನ್‌ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಶ್ರೀವಾಟ್ಸ್ ಗೋಸ್ವಾಮಿ (ವಿಕೆಟ್ ಕೀಪರ್), ವಿರಾಟ್ ಸಿಂಗ್, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಬ್ದುಲ್ ಸಮದ್, ವಿಜಯ್ ಶಂಕರ್, ಮುಹಮ್ಮದ್ ನಬಿ ಖಾನ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ಬವನಕಾ ಸಂದೀಪ್, ಸಂಜಯ್ ಯಾದವ್, ಫ್ಯಾಬಿಯನ್ ಅಲೆನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಶಹಬಾಝ್ ನದೀಮ್, ಸಿದ್ಧಾರ್ಥ್ ಕೌಲ್, ಬಿಲ್ಲಿ ಸ್ಟಾನ್ಲೇಕ್, ಟಿ.ನಟರಾಜನ್, ಬಾಸಿಲ್ ಥಾಂಪಿ.

ಡೆಲ್ಲಿ ಕ್ಯಾಪಿಟಲ್ಸ್ : ಶ್ರೇಯಸ್ ಅಯ್ಯರ್ (ನಾಯಕ), ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಪೃಥ್ವಿ ಶಾ, ಶಿಮ್ರಾನ್ ಹೆಟ್ಮಿಯರ್, ಕಾಗಿಸೊ ರಬಡಾ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾಂತ್ ಶರ್ಮಾ, ಅಕ್ಸರ್ ಪಟೇಲ್, ಸಂದೀಪ್ ಲಮಿಚನೆ ಡೇನಿಯಲ್ ಸ್ಯಾಮ್ಸ್, ಮೋಹಿತ್ ಶರ್ಮಾ, ಅನ್ರಿಚ್ ನಾರ್ಟ್ಜೆ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಅವೇಶ್ ಖಾನ್, ತುಷಾರ್ ದೇಶಪಾಂಡೆ, ಹರ್ಷಲ್ ಪಟೇಲ್, ಮಾರ್ಕಸ್ ಸ್ಟೊಯಿನಿಸ್, ಲಲಿತ್ ಯಾದವ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News