ಸಾಲ ಸ್ತಂಭನ ಮತ್ತು ಬಡ್ಡಿ ಪಾವತಿ: ನಿರ್ಧಾರಕ್ಕೆ ಕೇಂದ್ರಕ್ಕೆ ಅ.1ರ ಗಡುವು

Update: 2020-09-28 19:19 GMT

ಹೊಸದಿಲ್ಲಿ, ಸೆ.28: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗದ ಸಾಲಗಾರರಿಗೆ ಎಷ್ಟು ಸಮಯಾವಕಾಶವನ್ನು ನೀಡಬಹುದು ಮತ್ತು ಅವರು ಆ ಅವಧಿಗೆ ಬಡ್ಡಿಯನ್ನು ಪಾವತಿಸಬೇಕೇ ಎಂಬ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯವು ಅ.1ರ ಗಡುವು ವಿಧಿಸಿ ಸೋಮವಾರ ಆದೇಶಿಸಿದೆ.

ಗಡುವಿನ ಅಂತ್ಯದಲ್ಲಿ ಸರಕಾರವು ಸಾಲ ಮರುಪಾವತಿ ಸ್ತಂಭನದ ವಿಸ್ತರಣೆ,ಬಡ್ಡಿ ಮನ್ನಾ,ಕ್ಷೇತ್ರವಾರು ಪರಿಹಾರದ ಬಗ್ಗೆ ತಾನು ಕೈಗೊಳ್ಳಲಿರುವ ಕ್ರಮಗಳು ಹಾಗು ಮೆಹ್ರಿಷಿ ಸಮಿತಿಯ ಶಿಫಾರಸುಗಳ ಕುರಿತು ತನ್ನ ನಿರ್ಧಾರದ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಬೇಕಿದೆ. ಕೋವಿಡ್ ಸಂಬಂಧಿತ ಸಾಲ ಮರುಪಾವತಿ ಸ್ತಂಭನ ಅವಧಿಯ ಬಡ್ಡಿ ಮನ್ನಾ ಮಾಡುವುದರ ಪರಿಣಾಮಗಳನ್ನು ಲೆಕ್ಕ ಹಾಕುವಂತೆ ಮೆಹ್ರಿಷಿ ಸಮಿತಿಗೆ ಸೂಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News