ಗಾಂಜಾ ಮಾರಾಟ ಆರೋಪಿಗಳ ಬಂಧನ: 25 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

Update: 2020-09-30 18:11 GMT

ಬೆಂಗಳೂರು, ಸೆ.30: ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಮೂವರನ್ನು ಬಂಧಿಸಿರುವ ಜೆ.ಸಿ.ನಗರ ಪೊಲೀಸರು ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ ಗಾಂಜಾ ಇನ್ನಿತರ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕೇರಳದ ಕಣ್ಣೂರು ಶ್ರೀಕಂಠಪುರಂ ಕೈದಪುರಂ ಮೂಲದ ಕಾಡುಗೋಡಿ ಪೃಥ್ವಿ ಲೇಔಟ್ ಪ್ರಸ್ಟೀಜ್ ಅಪಾರ್ಟ್‍ಮೆಂಟ್‍ನ ಜಿಂಡೋ ಜೇಮ್ಸ್(29), ಕೇರಳದ ಕಣ್ಣೂರು ಜಿಲ್ಲೆಯ ಫಾರಾ ಆಳ್ಳುಂಗನ ಹೌಸ್ ನಿವಾಸಿ ಆದರ್ಶ(27) ಮತ್ತು ಕಣ್ಣೂರು ಜಿಲ್ಲೆಯ ಅಸಾನಕವಲಾ ವೆಲ್ಲಡ್ ಪೊನ್ನಾಟಿಲ್ ಹೌಸ್‍ನ ಇನ್ಮೇಶ್(32) ಬಂಧಿತರು ಎಂದು ಪೊಲೀಸರು ತಿಳಿಸಿದರು.

ಜೆ.ಸಿ.ನಗರದ ಬೋರ್ ಬಂಕ್ ರಸ್ತೆಯ ಬಳಿ ಕಾರಿನಲ್ಲಿ ಮೂವರು ಗಾಂಜಾ ಮತ್ತು ಎಂಡಿಎಂಎ ಎಂಬ ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮಾಹಿತಿಯ ಆಧಾರದಲ್ಲಿ ಜೆ.ಸಿ.ನಗರ ಪೊಲೀಸ್ ಇನ್‍ಸ್ಪೆಕ್ಟರ್ ನಾಗರಾಜ್ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 45 ಕೆ.ಜಿ.ಗಾಂಜಾ, 70 ಗ್ರಾಂ ಎಂಡಿಎಂಎ, 1000 ರೂ.ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ವಿಶಾಖಪಟ್ಟಣದಿಂದ ಗಾಂಜಾ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳು ಈ ಹಿಂದೆ ಗಾಂಜಾವನ್ನು ಲೂಬಿನ್ ಅಮಲ್‍ನಾಥ್ ಎಂಬಾತನಿಂದ ಖರೀದಿಸಿ, ಸೇವನೆ ಮಾಡಿದ್ದರು. ತದನಂತರ, ಗಾಂಜಾ ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News