ಟ್ವೆಂಟಿ -20: ನ್ಯೂಝಿಲ್ಯಾಂಡ್ ನ ವನಿತೆಯರಿಗೆ ಜಯ

Update: 2020-09-30 18:31 GMT

ಬ್ರಿಸ್ಬೇನ್, ಸೆ. 30: ನ್ಯೂಝಿಲ್ಯಾಂಡ್ ಮಹಿಳಾ ಕ್ರಿಕೆಟ್ ತಂಡವು ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧದ 13ಪಂದ್ಯಗಳ ಸೋಲಿನ ಸರಮಾಲೆಯನ್ನು ಕೊನೆಗೊಳಿಸಿದೆ. ನ್ಯೂಝಿಲ್ಯಾಂಡ್ ಬುಧವಾರ ಆಸ್ಟ್ರೇಲಿಯ ವಿರುದ್ಧ ಮೂರನೇ ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್‌ಗಳ ಜಯ ಸಾಧಿಸಿದೆ.

ಅಮೆಲಿಯಾ ಕೆರ್ (18ಕ್ಕೆ 2) ದಾಳಿಗೆ ಸಿಲುಕಿದ ಆಸ್ಟ್ರೇಲಿಯ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 123 ರನ್ ಗಳಿಸಿತ್ತು. ನ್ಯೂಝಿಲ್ಯಾಂಡ್ ಅಂತಿಮ ಓವರ್‌ನಲ್ಲಿ ಗೆಲುವಿಗೆ ಎಂಟು ರನ್ ಕಲೆ ಹಾಕಬೇಕಿತ್ತು. ಕೆರ್ ಚೆಂಡನ್ನು ಸತತ ಬೌಂಡರಿ ಗೆರೆ ದಾಟಿಸಿ ನ್ಯೂಝಿಲ್ಯಾಂಡ್‌ನ ಸ್ಕೋರ್‌ನ್ನು 5 ವಿಕೆಟ್ ನಷ್ಟದಲ್ಲಿ 125ಕ್ಕೆ ಏರಿಸಿದರು. ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ನ್ಯೂಝಿಲ್ಯಾಂಡ್ ಗೆಲುವು ದಾಖಲಿಸಿತು. 10 ಎಸೆತಗಳಲ್ಲಿ ಅಜೇಯ 18 ರನ್ ಗಳಿಸಿದ ಕೆರ್ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

  ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ ಆರಂಭಿಕ ಎರಡು ಟ್ವೆಂಟಿ-20 ಪಂದ್ಯಗಳನ್ನು ಗೆದ್ದುಕೊಂಡು ಸತತ 10ನೇ ಬಾರಿ ಟ್ವೆಂಟಿ-20 ಸರಣಿ ಗೆಲುವು ದಾಖಲಿಸಿತ್ತು. ಉಭಯ ತಂಡಗಳ ನುಡವಿನ ಏಕದಿನ ಸರಣಿಯ ಮೊದಲ ಪಂದ್ಯ ಶನಿವಾರ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News