ಎಚ್‍ಎಎಲ್ ಸಿಇಒ ಆಗಿ ಎಸ್.ಅನ್ಬುವೆಲನ್ ಅಧಿಕಾರ ಸ್ವೀಕಾರ

Update: 2020-10-01 16:50 GMT

ಬೆಂಗಳೂರು, ಅ.1: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪೆನಿಯ ನೂತನ ಸಿಇಒ ಆಗಿ ಎಸ್.ಅನ್ಬುವೆಲನ್ ಅಧಿಕಾರ ಸ್ವೀಕರಿಸಿದರು.

ಮದ್ರಾಸ್ ಐಐಟಿ ವಿಮಾನ ಉತ್ಪಾದನಾ ವಿಭಾಗದ ಇಂಜಿನಿಯರಿಂಗ್‍ನಲ್ಲಿ ಎಂಟೆಕ್ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಎಸ್.ಅನ್ಬುವೆಲನ್ ಅವರು, ಬೆಂಗಳೂರಿನ ಎಕ್ಸೈಎಂಇನಿಂದ ಬಿಜಿನೆಸ್ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಡಿಪ್ಲೋಮಾ ಕೂಡ ಪೂರೈಸಿದ್ದಾರೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ, ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅವರಿಗೆ 34 ವರ್ಷಗಳ ಅನುಭವ ಇದೆ.

ಗುಣಮಟ್ಟದ ಉತ್ಪನ್ನಗಳನ್ನು ಹಾಗೂ ಹೆಲಿಕಾಫ್ಟರ್ ಸಂಕೀರ್ಣದಿಂದ ಸಮಯಕ್ಕೆ ಸರಿಯಾಗಿ ತಲುಪಿಸುವುದರ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ

-ಎಸ್.ಅನ್ಬುವೆಲನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News