ಹಾಜಿ ಅಬ್ದುಲ್ ರಝಾಕ್

Update: 2020-10-04 18:06 GMT

ಮಂಗಳೂರು: ಮೀನು ವ್ಯಾಪಾರಿ, ಕುದ್ರೋಳಿ ನಿವಾಸಿ ಹಾಜಿ ಅಬ್ದುಲ್ ರಝಾಕ್ (72) ರವಿವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರು ಹಯಾತುಲ್ ಇಸ್ಲಾಂ ಅಸೋಸಿಯೇಶನ್ ಮಾಜಿ ಅಧ್ಯಕ್ಷ, ಬದ್ರಿಯಾ ಜುಮಾ ಮಸೀದಿ ಕುಡುಪಾಡಿ ಇದರ ಮಾಜಿ ಅಧ್ಯಕ್ಷ ಹಾಗೂ ಅಲ್ ಅಝ್ಹರಿಯ ಮದ್ರಸ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇವರು 3 ಗಂಡು, 2 ಹೆಣ್ಣು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸೋಮವಾರ ಲುಹರ್ ನಮಾಝ್ ಬಳಿಕ ಮಂಗಳೂರು ಕೇಂದ್ರ ಜುಮಾ ಮಸೀದಿಯಲ್ಲಿ ಇವರ ಅಂತ್ಯಸಂಸ್ಕಾರ ನಡೆಯಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ