×
Ad

ನೂತನ ಮರ್ಸಿಡಿಸ್ ಬೆಂಝ್ ಇಕ್ಯೂಸಿ ವಿದ್ಯುತ್ ಕಾರು ಬಿಡುಗಡೆ

Update: 2020-10-09 23:35 IST

ಬೆಂಗಳೂರು, ಅ. 9: ಟಿವಿಎಸ್ ಸುಂದರಂ ಮೋಟರ್ಸ್ ಗುರುವಾರ ನಗರದ ಕಸ್ತೂರ್ ಬಾ ರಸ್ತೆಯಲ್ಲಿರುವ ತನ್ನ ಶೋರೂಮಿನಲ್ಲಿ ನೂತನ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 4ಮ್ಯಾಟಿಕ್ ವಿದ್ಯುತ್ ಚಾಲಿತ ಕಾರನ್ನು ಬಿಡುಗಡೆಗೊಳಿಸಿದೆ.

ಕಂಪನಿಯು ನೂತನ ಕಾರಿಗೆ ಕಿ.ಮೀ.ಗಳ ಮಿತಿಯಿಲ್ಲದೆ ಐದು ವರ್ಷಗಳ ಕಾಂಪ್ರಿಹೆನ್ಸಿವ್ ಸರ್ವಿಸ್ ಪ್ಯಾಕೇಜ್, ಐದು ವರ್ಷಗಳ ವಿಸ್ತರಿತ ವಾರಂಟಿ ಮತ್ತು ಯಾವುದೇ ಮಿತಿಯಿಲ್ಲದೆ ಐದು ವರ್ಷಗಳ ಆನ್-ರೋಡ್ ಅಸಿಸ್ಟನ್ಸ್ ಅನ್ನು ಒದಗಿಸಲಿದೆ.

ಆಟೊಮೊಬೈಲ್ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಂಪನಿಯು ಮರ್ಸಿಡಿಸ್ ಇಕ್ಯೂಸಿಗೆ ಎಂಟು ವರ್ಷ ಅಥವಾ 1,60,000 ಕಿ.ಮೀ.(ಯಾವುದು ಮೊದಲೋ ಅದು)ಗಳ ಬ್ಯಾಟರಿ ರಕ್ಷಣೆಯನ್ನು ನೀಡಲಿದೆ. ಕಾರು ಖರೀದಿಯ ಸಂದರ್ಭದಲ್ಲಿ ಗ್ರಾಹಕರಿಗೆ ಮೂರು ವರ್ಷಗಳವರೆಗೆ ಖಚಿತ ಬಯ್‌ಬ್ಯಾಕ್ ಸೌಲಭ್ಯವನ್ನೂ ಕಂಪನಿಯು ಒದಗಿಸಲಿದೆ. ಕಾರು ಖರೀದಿಗೆ ಸಾಲ ಲಭ್ಯವಿದ್ದು, ಮೂರು ವರ್ಷಗಳ ಅವಧಿಗೆ ಶೇ.40ರಷ್ಟು ಕಡಿಮೆ ಇಎಂಐ ನಿಗದಿಗೊಳಿಸಲಾಗಿದೆ. ಇಎಂಐ ಮಾಸಿಕ 1,44,111 ರೂ.ಗಳಿಂದ ಆರಂಭಗೊಳ್ಳುತ್ತದೆ.

ಇಕ್ಯೂಸಿ ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 450 ಕಿ.ಮೀ.ಗಳಷ್ಟು ಓಡಲಿದ್ದು, ಎಲ್ಲ ಬಗೆಯ ಅಂತರ್‌ನಗರ ಪ್ರಯಾಣಗಳಿಗೆ ಮತ್ತು ದೈನಂದಿನ ಬಳಕೆಗೆ ಸೂಕ್ತವಾಗಿದೆ. ದೇಶಾದ್ಯಂತ 48 ನಗರಗಳಲ್ಲಿ 100ಕ್ಕೂ ಅಧಿಕ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದ್ದು, ವಾಲ್ ಬಾಕ್ಸ್ ಚಾರ್ಜಿಂಗ್ ಸೌಲಭ್ಯವಿರುತ್ತದೆ.

ಮೊದಲ 50 ಮರ್ಸಿಡಿಸ್ ಬೆಂಜ್ ಇಕ್ಯೂಸಿ ಕಾರುಗಳಿಗೆ 99.30 ಲ.ರೂ. ಶೋರೂಮ್ ಬೆಲೆಯನ್ನು ನಿಗದಿಗೊಳಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಸುಂದರಂ ಮೋಟರ್ಸ್‌ಗೆ ಭೇಟಿಯನ್ನು ನೀಡಬಹುದು ಅಥವಾ 91-9148155175 ಸಂಖ್ಯೆಗೆ ಕರೆಯನ್ನು ಮಾಡಬಹುದು. ಇಮೇಲ್ ವಿಳಾಸ: panchajanya.c@sundarammotors.com ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News