ಬೆಂಗಳೂರು ಜಿಕೆವಿಕೆ ಆವರಣದಲ್ಲಿ ನ.6ರಿಂದ ಕೃಷಿ ಮೇಳ

Update: 2020-10-11 18:29 GMT

ಬೆಂಗಳೂರು, ಅ. 11: ಬೆಂಗಳೂರು ಜಿಕೆವಿಕೆ ಆವರಣದಲ್ಲಿ ನ.6ರಿಂದ 8ರವರೆಗೆ ಕೃಷಿ ಮೇಳ ಆಯೋಜಿಸಲಾಗಿದೆ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕುಲಪತಿ ಡಾ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಕೃಷಿ ಮೇಳದಲ್ಲಿ ಜಿಕೆವಿಕೆ ಅಭಿವೃದ್ಧಿ ಪಡಿಸಿರುವ ನೆಲಗಡಲೆ, ಅಲಸಂದೆ ಹಾಗೂ ಮಾವಿನ ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ವೇಳೆ ಮೇಳದಲ್ಲಿ ಹೆಚ್ಚು ಜನಸಂದಣಿ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡನಿಂದಾಗಿ ಈ ಬಾರಿ 25ರಿಂದ 30 ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ರಾಜ್ಯಮಟ್ಟದ 6 ಜಿಲ್ಲಾ ಹಾಗೂ 20 ತಾಲೂಕು ಮಟ್ಟದಲ್ಲಿ 120 ಪ್ರಗತಿಪರ ಮತ್ತು ಯುವ ರೈತರಿಗೆ ರೈತ ಪ್ರಶಸ್ತಿಯನ್ನು ಪ್ರದಾಣ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕವು ಕೃಷಿ ಮೇಳವನ್ನು ವೀಕ್ಷಣೆ ಮಾಡಲು ಅವಕಾಶ ನೀಡಲಾಗುತ್ತದೆ. ವಿವಿಧ ಗೋಷ್ಟಿಗಳ ವಿಚಾರಗಳು ನಡೆಯಲಿದ್ದು, ರೈತ ತಜ್ಞರು ರೈತರ ಪ್ರಶ್ನೆಗಳಿಗೆ ಆನ್‍ಲೈನ್ ಮೂಲಕವೇ ಉತ್ತರವನ್ನು ನೀಡಲಿದ್ದಾರೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News