13 ಮಂದಿ ಉಪ ಕಾರ್ಯದರ್ಶಿಗಳ ವೇತನ ಶ್ರೇಣಿ ಹೆಚ್ಚಿಸಿ ಪದೋನ್ನತಿ
ಬೆಂಗಳೂರು, ಅ. 12: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಾಮಾನ್ಯ ಸೇವೆಯ ಗ್ರೂಪ್ ಎ ವೃಂದದ ಒಟ್ಟು 13 ಮಂದಿ ಉಪ ಕಾರ್ಯದರ್ಶಿ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವೇತನ ಶ್ರೇಣಿ 82 ಸಾವಿರ ರೂ.ನಿಂದ 1,17,700 ರೂ.ಗಳಿಗೆ ಹೆಚ್ಚಳ ಮಾಡಿ ಪದೋನ್ನತಿ ನೀಡಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಲ್ಲೆ ಮುಂದುವರಿಸಿ ಆದೇಶ ಹೊರಡಿಸಲಾಗಿದೆ.
ಎಸ್.ಮುನಿರಾಜು-ಮುಖ್ಯ ಕಾರ್ಯಾಚರಣೆ ಅಧಿಕಾರಿ ಹಾಗೂ ನಿರ್ದೇಶಕರು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಬೆಂಗಳೂರು, ಕೆ.ರೇವಣ್ಣ-ನಿರ್ದೇಶಕರು ಪಂಚಾಯತ್ ರಾಜ್ ಆಯುಕ್ತಾಲಯ, ಎ.ಹನುಮನರಸಯ್ಯ(ಸ್ಥಳ ನಿರೀಕ್ಷೆಯಲ್ಲಿ), ಗುಡೂರ್ ಭೀಮಸೇನ್-ಉಪ ಕಾರ್ಯದರ್ಶಿ ಜಿ.ಪಂ. ಕೊಡಗು, ವೈ.ಎಂ ಮುಹಮ್ಮದ್ ಯೂಸುಫ್- ಸಿಇಓ ವಕ್ಫ್ ಮಂಡಳಿ ಬೆಂಗಳೂರು, ಡಾ.ಸಿ. ಸಿದ್ದರಾಮಯ್ಯ- ಜಿ.ಪಂ ಬೆಂಗಳೂರು ನಗರ ಜಿಲ್ಲೆ
ಡಾ.ಎಂ.ಆರ್.ಏಕಾಂತಪ್ಪ-ನಿರ್ದೇಶಕರು ಪಂಚಾಯತ್ ರಾಜ್ ಆಯುಕ್ತಾಲಯ, ಅಮರೇಶ್ ಆರ್.- ಉಪಕಾರ್ಯದರ್ಶಿ ಜಿ.ಪಂ. ಬಾಗಲಕೋಟೆ, ಕೆ.ಆರ್.ರುದ್ರಪ್ಪ-ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು, ಎನ್.ಡಿ.ಪ್ರಕಾಶ್-ಉಪ ಕಾರ್ಯದರ್ಶಿ ಜಿ.ಪಂ. ಮಂಡ್ಯ, ಕೆ.ಕರಿಯಪ್ಪ-ಉಪ ಕಾರ್ಯದರ್ಶಿ ಜಿ.ಪಂ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕಾಂತರಾಜು- ಆಪ್ತ ಕಾರ್ಯದರ್ಶಿ ಆಹಾರ ಸಚಿವರು, ಎಸ್.ಬಿ.ಮುಳ್ಳೊಳ್ಳಿ-ಉಪ ಕಾರ್ಯದರ್ಶಿ ಜಿ.ಪಂ.ಬೆಳಗಾವಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ತಿಳಿಸಲಾಗಿದೆ.