ವಿದ್ಯುತ್ ಶುಲ್ಕ ಆನ್‍ಲೈನ್ ಪಾವತಿ: ಗ್ರಾಹಕರಿಗೆ ಸಮಸ್ಯೆ, ಬೆಸ್ಕಾಂ ವಿರುದ್ಧ ಅಸಮಾಧಾನ

Update: 2020-10-12 16:56 GMT

ಬೆಂಗಳೂರು, ಅ.12: ವಿದ್ಯುತ್ ಶುಲ್ಕವನ್ನು ಆನ್‍ಲೈನ್ ಪಾವತಿಸಲು ಸಾಧ್ಯವಾಗದೆ ಹಲವು ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಲೋಪ ಸರಿಪಡಿಸದ ಬೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿ ತಿಂಗಳ 1ನೇ ತಾರೀಕಿಗೆ ವಿದ್ಯುತ್ ಬಿಲ್ ನೀಡುತ್ತಾರೆ. 15 ದಿನ ಅವಕಾಶ ಇರುತ್ತದೆ. ಈ ಗಡುವಿನೊಳಗೆ ಕಟ್ಟದಿದ್ದರೆ ದಂಡ ಹಾಕುತ್ತಾರೆ, ಒಂದೆರಡು ದಿನ ತಡವಾದರೆ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುತ್ತಾರೆ. ಆದರೆ, ಆನ್‍ಲೈನ್‍ನಲ್ಲಿ ಬಿಲ್ ಕಟ್ಟಬೇಕು ಎಂದರೆ ತಾಂತ್ರಿಕ ತೊಂದರೆಗಳು ಎದುರಾಗುತ್ತಿವೆ ಎಂದು ಚಿಕ್ಕಪೇಟೆ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಸ್ಕಾಂನ ತಂತ್ರಾಂಶದಲ್ಲಿ ಶುಲ್ಕದ ಮೊತ್ತವನ್ನು ದಾಖಲಿಸಿರುವುದಿಲ್ಲ ಅಥವಾ ಅಪ್‍ಡೇಟ್ ಮಾಡಿರುವುದಿಲ್ಲ. ಸರ್ವರ್ ನಲ್ಲಿ ಅಪ್‍ಡೇಟ್ ಆಗುವವರೆಗೆ ನಾವು ಆನ್‍ಲೈನ್‍ನಲ್ಲಿ ಶುಲ್ಕ ಪಾವತಿಸಲು ಸಾಧ್ಯವಾಗುವುದಿಲ್ಲ. ಎಷ್ಟೊ ಜನ ಬಿಲ್ ಬಂದ ತಕ್ಷಣ ಪಾವತಿಸಲು ಮುಂದಾಗುತ್ತಾರೆ. ಈ ವೇಳೆ ಅಪ್‍ಡೇಟ್ ಆಗಿರಲಿಲ್ಲ ಎಂದರೆ ಮರೆತು ಹೋಗುತ್ತದೆ ಎಂದು ಅವರು ಹೇಳಿದ್ದಾರೆ.

ಗ್ರಾಹಕರಿಗೆ ಅನುಕೂಲವಾಗಲಿ ಎಂದೇ ಆನ್‍ಲೈನ್ ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ, ಅದನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ. ಬೆಂಗಳೂರು ಒನ್ ಅಥವಾ ಬೆಸ್ಕಾಂ ಕಚೇರಿಗೆ ಹೋಗಿ ಕಟ್ಟಲು ಎಷ್ಟೋ ಜನರಿಗೆ ಸಾಧ್ಯವಾಗುವುದಿಲ್ಲ. ಹಿರಿಯ ನಾಗರಿಕರಿಗೂ ಕಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News