30 ಸಾವಿರ ವಿದ್ಯಾರ್ಥಿಗಳಿಗೆ ಆಹಾರ-ಕಲಿಕಾ ಸಾಮಗ್ರಿ ವಿತರಣೆ

Update: 2020-10-12 17:58 GMT

ಬೆಂಗಳೂರು, ಅ.12: ಬುಡಕಟ್ಟು ಜನರ ಉನ್ನತಿಗಾಗಿ ಶ್ರಮಿಸುತ್ತಿರುವ ಕಳಿಂಗ ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಕೆಐಎಸ್‍ಎಸ್) ಸಂಸ್ಥೆಯು ಲಾಕ್‍ಡೌನ್ ಅವಧಿಯಲ್ಲಿ ಕಿಸ್ ಫೌಂಡೇಷನ್ ಮೂಲಕ 30 ಸಾವಿರ ವಿದ್ಯಾರ್ಥಿಗಳಿಗೆ ಆಹಾರದ ಸಾಮಗ್ರಿ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಗಿದೆ.

ಕಳಿಂಗ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಚ್ಯುತ ಸಮಂತ ನೇತೃತ್ವದಲ್ಲಿ ಈ ಕಾರ್ಯ ಮಾಡಲಾಗಿದೆ. ಕೋವಿಡ್‍ನಿಂದಾಗಿ ಶಾಲೆಗಳು ಪ್ರಾರಂಭವಾಗದ ಪರಿಣಾಮ ಗುಡ್ಡಗಾಡಿನಲ್ಲಿರುವ ಮಕ್ಕಳಿಗೆ ಆನ್‍ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಎಲ್‍ಕೆಜಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ವೈದ್ಯಕೀಯ ನೆರವು, ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆಯ ಜತೆಗೆ ಪಡಿತರ ಕಿಟ್‍ಗಳನ್ನು ಮನೆ ಬಾಗಿಲಿಗೆ ಪ್ರತಿ ತಿಂಗಳು ತಲುಪಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News