ಸ್ಟೆಲ್ಲಾ ವಾಸ್
Update: 2020-10-13 23:02 IST
ಮೂಡುಬಿದಿರೆ: ಇಲ್ಲಿನ ಗಂಟಾಲ್ಕಟೆ ನಿವಾಸಿ ದಿ. ಎಡ್ವಿನ್ ವಾಸ್ ಅವರ ಪತ್ನಿ, ಸಮಾಜ ಸೇವಕಿ ಸ್ಟೆಲ್ಲಾ ವಾಸ್ (82ವ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರು ನಾಲ್ವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.
ಮೂಡುಬಿದಿರೆಯಲ್ಲಿ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿ ಸರಕಾರಿ ಸೌಲಭ್ಯಗಳನ್ನು ದುರ್ಬಲರಿಗೆ ತಲುಪಿಸುವಲ್ಲಿ ಕಾಳಜಿ ವಹಿಸಿದ್ದರು. ಅಶಕ್ತರ, ನಿರ್ಗತಿಕರ ಬಗ್ಗೆ ವಿಶೇಷವಾಗಿ ಶ್ರಮಿಸಿ ಜನಾನುರಾಗಿಯಾಗಿದ್ದರು.