ಜೂನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಐಸಿಸಿ

Update: 2020-10-13 18:45 GMT

ಹೊಸದಿಲ್ಲಿ: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಈ ಹಿಂದೆ ನಿಗದಿಯಾಗಿರುವಂತೆ 2021ರ ಜೂನ್‌ನಲ್ಲಿ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ.

 ಕೋವಿಡ್-19 ಕಾರಣದಿಂದಾಗಿ ಅರ್ಹತಾ ಸುತ್ತಿನ ಟೆಸ್ಟ್ ಪಂದ್ಯಗಳಿಗೆ ಸಮಸ್ಯೆಯಾಗಿದ್ದರೂ, ಫೈನಲ್ ಪಂದ್ಯಕ್ಕೆ ಅಡ್ಡಿಯಾಗದು ಎಂಬ ವಿಶ್ವಾಸವನ್ನು ಐಸಿಸಿ ವ್ಯಕ್ತಪಡಿಸಿದೆ.

 ಸಾಂಕ್ರಾಮಿಕ ರೋಗದ ಹರಡುವಿಕೆಯು ಕೆಲವು ಟೆಸ್ಟ್ ಸರಣಿಗಳನ್ನು ರದ್ದುಪಡಿಸಲು ಪ್ರೇರೆಪಿಸಿತು. ಇದರಿಂದಾಗಿ ಪಾಯಿಂಟ್ಸ್ ಗಳ ಹಂಚಿಕೆ ಪ್ರಕ್ರಿಯೆ ಸವಾಲಾಗಿ ಪರಿಣಮಿಸಿತ್ತು.

 ‘‘ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಯೋಜನೆ ಇನ್ನೂ ಪ್ರಗತಿಯಲ್ಲಿದೆ’’ ಎಂದು ಐಸಿಸಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ನಿಗದಿಯಾದಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 9 ಅಗ್ರ ತಂಡಗಳು ಎರಡು ವರ್ಷಗಳಲ್ಲಿ 6 ಸರಣಿಗಳನ್ನು ಆಡಬೇಕಾಗಿದೆ. ಇದರಲ್ಲಿ ಅಗ್ರ ಎರಡು ತಂಡಗಳು ಫೈನಲ್‌ಗೆ ತೇರ್ಗಡೆಯಾಗುತ್ತದೆ.

 ಇದೀಗ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ 4 ಸರಣಿಗಳನ್ನು ಆಡಿರುವ ಭಾರತ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯ ಎರಡನೇ ಸ್ಥಾನ, ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ.

  ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕಟ್ಟುನಿಟ್ಟಾದ ನಿಯಮ ಜಾರಿಗೊಂಡ ಹಿನ್ನೆಲೆಯಲ್ಲಿ ಈ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯನ್ನು ಮುಂದೂಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News