ಸೆಂಟ್ ಪೀಟರ್ಸ್ ಬರ್ಗ್ ಓಪನ್ ಟೆನಿಸ್ವಾ: ವ್ರಿಂಕಾ 2ನೇ ಸುತ್ತು ಪ್ರವೇಶ

Update: 2020-10-13 18:47 GMT

ಸೈಂಟ್ ಪೀಟರ್ಸ್‌ಬರ್ಗ್: ಸೈಂಟ್ ಪೀಟರ್ಸ್‌ಬರ್ಗ್ ಟೆನಿಸ್ ಓಪನ್‌ನ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಸ್ಟಾನ್ ವಾವ್ರಿಂಕಾ ಅವರು ಇಂಗ್ಲೆಂಡ್‌ನ ಡಾನ್ ಇವಾನ್ಸ್ ರನ್ನು ಮಣಿಸುವ ಮೂಲಕ ಮೂರು ಮ್ಯಾಚ್ ಪಾಯಿಂಟ್ಸ್‌ಗಳನ್ನು ಉಳಿಸಿಕೊಂಡಿದ್ದಾರೆ.

ಹೆಸರಿಸದ ಆಟಗಾರನ ಕೊರೋನ ವೈರಸ್ ಪ್ರಕರಣದಿಂದ ಟೂರ್ನಮೆಂಟ್‌ಗೆ ಅಡ್ಡಿಯಾಗಿದ್ದರೂ, ಸ್ಟಾನ್ ವಾವ್ರಿಂಕಾ ಅವರು ಡಾನ್ ಇವಾನ್ಸ್ ವಿರುದ್ಧ 3-6, 7-6 ( 3), 7-5 ಅಂತರದಲ್ಲಿ ಜಯ ಗಳಿಸುವ ಮೂಲಕ ಸ್ಪರ್ಧಾತ್ಮಕ ಟೆನಿಸ್‌ಗೆ ಯಶಸ್ವಿಯಾಗಿ ವಾಪಸಾದರು.

 ಮೊದಲ ಸೆಟ್‌ನಲ್ಲಿ 2016ರ ಯು.ಎಸ್. ಓಪನ್ ಚಾಂಪಿಯನ್ ವಾವ್ರಿಂಕಾ ಹಿನ್ನಡೆ ಅನುಭವಿಸಿದರೂ, ನಂತರ ಎರಡನೇ ಸೆಟ್‌ನಲ್ಲಿ ಟೈಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿ ಎದುರಾಳಿಗೆ ತಿರುಗೇಟು ನೀಡಿದರು. ಐದನೇ ಶ್ರೇಯಾಂಕದ ವಾವ್ರಿಂಕಾ ಅವರು 2018ರಲ್ಲಿ ಗಾಯದಿಂದ ಪುನರಾಗಮನದ ಬಳಿಕ ಮೊದಲ ಪ್ರಶಸ್ತಿಗೆ ಪ್ರಯತ್ನ ನಡೆಸಿದ್ದಾರೆ. ಸೈಂಟ್ ಪೀಟರ್ಸ್‌ ಬರ್ಗ್‌ನಲ್ಲಿ ಈ ಹಿಂದೆ ನಡೆದ ಎರಡು ಪಂದ್ಯಗಳಲ್ಲಿ ಒಂದು ಬಾರಿ ಫೈನಲ್‌ಗೆ ಮತ್ತು ಇನ್ನೊಂದು ಬಾರಿ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News