ಬೆಂವಿವಿ: ಅ.22ರಿಂದ ಪಿಎಚ್.ಡಿ ಕೌನ್ಸಲಿಂಗ್ ಪ್ರಾರಂಭ

Update: 2020-10-14 12:11 GMT

ಬೆಂಗಳೂರು, ಅ.14: ಬೆಂಗಳೂರು ವಿಶ್ವವಿದ್ಯಾಲಯದ 2020-21ನೇ ಸಾಲಿನ ಪಿಎಚ್.ಡಿ ಕೌನ್ಸಲಿಂಗ್‍ನ ಮೊದಲ ಹಂತದ ಪ್ರಕ್ರಿಯೆ ಅ.22 ಬೆಳಗ್ಗೆ 10ರಿಂದ ಬೆಂವಿವಿ ಜ್ಞಾನಭಾರತಿ ಆವರಣ ಹಾಗೂ ಇಂಜಿನಿಯರಿಂಗ್ ವಿಭಾಗಗಳಿಗೆ ಸಂಬಂಧಿಸಿದಂತಹ ಕೌನ್ಸಲಿಂಗ್‍ ಕೆ.ಆರ್.ವೃತ್ತದ ಯುವಿಸಿಇಯಲ್ಲಿ ನಡೆಯಲಿದೆ.

ಅ.22ರಂದು ಬೆಳಗ್ಗೆ 8ರಿಂದ 10ರವರೆಗೆ ಜ್ಞಾನಭಾರತಿ ಆವರಣದಲ್ಲಿರುವ ಸಂಬಂಧಪಟ್ಟ ವಿಭಾಗಗಳಲ್ಲಿ ಮತ್ತು ಇಂಜಿನಿಯರಿಂಗ್ ವಿಭಾಗಗಳಿಗೆ ಸಂಬಂಧಪಟ್ಟ ಕೋರ್ಸ್‍ಗಳಿಗೆ ಯುವಿಸಿಇ, ಕೆ.ಆರ್.ವೃತ್ತ, ಬೆಂಗಳೂರು ಇಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುವುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ phd.bangaloreuniversity.ac.in  /buphd.inhawk.com  ನ್ನು ನೋಡಲು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News