ಕೋವಿಡ್-19 ಜಾಗೃತಿ ಕಾರ್ಯಕ್ರಮಕ್ಕೆ ಹೈಕೋರ್ಟ್ ಸಿಜೆ ಚಾಲನೆ

Update: 2020-10-14 12:45 GMT

ಬೆಂಗಳೂರು, ಅ.14: ಕೋವಿಡ್-19 ಜಾಗೃತಿ ‘ಸುರಕ್ಷಿತವಾಗಿರಿ ಹಾಗೂ ಇತರರನ್ನು ಸುರಕ್ಷಿತವಾಗಿರಿಸಿ’ ಕಾರ್ಯಕ್ರಮಕ್ಕೆ ಬುಧವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರು ಚಾಲನೆ ನೀಡಿದರು.

ರಾಜ್ಯ ಉಚ್ಚ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ವಕೀಲರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದ ಅವರು ಬಳಿಕ ಸಾರ್ವಜನಿಕರ ಜಾಗೃತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷವಾಗಿ ನಿರ್ಮಿಸಿದ್ದ ಕೋವಿಡ್ ಜಾಗೃತಿ ಸಂದೇಶಗಳನ್ನು ಒಳಗೊಂಡ ಎಲ್‍ಇಡಿ ವಾಲ್ ಹೊಂದಿರುವ ವಾಹನಕ್ಕೆ ಚಾಲನೆ ನೀಡಿದರು.

ಕೋವಿಡ್-19 ಜಾಗೃತಿ ಸಂದೇಶಗಳನ್ನೊಳಗೊಂಡ ಭಿತ್ತಿಪತ್ರ ಹಾಗೂ ಸಂದೇಶಗಳೊಂದಿಗೆ ಹಲವಾರು ವಿಶೇಷ ವಾಹನದ ಜೊತೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಆವರಣದವರೆಗೆ ಹೆಜ್ಜೆ ಹಾಕಲಾಯಿತು.

ಬಳಿಕ ಎಲ್‍ಇಡಿ ವಾಲ್ ಹೊಂದಿರುವ ವಾಹನವು ವಿಧಾನಸೌಧ, ಎಂ.ಜಿ.ರಸ್ತೆ, ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್, ಕಾರ್ಪೋರೇಷನ್, ಕೆ.ಆರ್.ಸರ್ಕಲ್, ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ, ಜಯನಗರ, ಜೆ.ಪಿ.ನಗರ ಮುಖಾಂತರ ಸಾಗಿ ಬನಶಂಕರಿಯಲ್ಲಿ ಸಮಾರೋಪಗೊಂಡಿತು.

ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್, ಅಲೋಕ್ ಆರಾಧೆ, ಬಿ.ವಿ.ನಾಗರತ್ನ, ಸುಜಾತ, ಬಿ.ವೀರಪ್ಪ, ಜಿ.ನರೇಂದ್ರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News