'ಕಸದ ಮಾಫಿಯಾ': ಆರ್.ಆರ್.ನಗರ ಬಿಬಿಎಂಪಿ ಕಚೇರಿ ಎದುರು ಆಪ್ ಪ್ರತಿಭಟನೆ

Update: 2020-10-14 12:58 GMT

ಬೆಂಗಳೂರು, ಅ.14: ಬೆಂಗಳೂರನ್ನು ಬಿಬಿಎಂಪಿ ಅಧಿಕಾರಿಗಳು ಕಸದ ಮಾಫಿಯಾ ಕೈಗೆ ಕೊಟ್ಟು ಕೊಂಪೆ ಮಾಡಿದ್ದಾರೆ ಹಾಗೂ ಇದಕ್ಕೆ ರಾಜ್ಯ ಸರಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದಿಂದ ಬುಧವಾರ ಬೆಳಗ್ಗೆ ಆರ್.ಆರ್.ನಗರದ ಬಿಬಿಎಂಪಿ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರ ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಆರ್.ಆರ್.ನಗರ ನಿವಾಸಿ ಸಂದೀಪ್ ಎನ್ನುವವರು ಬಿಬಿಎಂಪಿ ಸಹಾಯ ಆ್ಯಪ್ ಮೂಲಕ ಮನೆ ಹತ್ತಿರ ಇದ್ದ ಕಸದ ಸಮಸ್ಯೆ ಬಗ್ಗೆ ದೂರು ನೀಡಿದ್ದರು. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಅಧಿಕಾರಿಗಳು ಅಮಾಯಕ ಪೌರಕಾರ್ಮಿಕರನ್ನು ಎತ್ತಿಕಟ್ಟಿ ಕಸದ ಮಾಫಿಯಾ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಸುರೇಶ್ ರಾಥೋಡ್, ದರ್ಶನ್ ಜೈನ್, ವೆಂಕಟೇಗೌಡ, ಸತೀಸ್‍ಗೌಡ, ಸುಮನ್ ಪ್ರಶಾಂತ್ ಹಾಗೂ ನೂರಾರೂ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News