ಕಾಂಗ್ರೆಸ್‍ನಿಂದ ಸಂಪತ್ ರಾಜ್‍ರನ್ನು ಉಚ್ಚಾಟಿಸುವಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಒತ್ತಾಯ

Update: 2020-10-15 12:22 GMT
ಸಂಪತ್ ರಾಜ್‍- ಶ್ರೀನಿವಾಸಮೂರ್ತಿ

ಬೆಂಗಳೂರು:ಲ, ಅ.15: ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಕಾಂಗ್ರೆಸ್ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪತ್ ಶಾಸಕರ ಪ್ರಾಣ ತೆಗೆಯುವ ಕೆಲಸ ಮಾಡಿದ್ದಾರೆ. ಇಂತಹವರನ್ನ ಮೊದಲು ಪಕ್ಷದಿಂದ ಉಚ್ಚಾಟಿಸಬೇಕು. ಇಂತಹವರು ಪಕ್ಷದಲ್ಲಿ ಇರುವುದು ಬೇಡ ಎಂದು ಹೇಳಿದರು.

ಯಾರೇ ಆಗಲಿ ಅಪರಾಧಿ ಅಪರಾಧಿಯೇ. ತಪ್ಪು ಯಾರು ಮಾಡಿದರೂ ತಪ್ಪೇ. ನನ್ನ ಮನೆಯನ್ನು ಒಡೆದು ಹಾಕಿದರು. ನಮ್ಮ ಸಹೋದರನ ಮನೆಯನ್ನೂ ಹಾಳು ಮಾಡಿದರು. ನಾವು ಯಾವ ದ್ವೇಷದ ರಾಜಕಾರಣವನ್ನೂ ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ. ಇಂತಹ ಕೆಲಸ ಮಾಡಿದ್ದು ನನಗೆ ತುಂಬಾ ನೋವಾಗಿದೆ ಎಂದು ಹೇಳಿದರು.

ನಾನು ಯಾರ ಜೊತೆಯೂ ದ್ವೇಷ ಸಾಧಿಸಿಲ್ಲ. ನನ್ನ ಮೇಲೆ ಯಾಕೆ ದ್ವೇಷ ಸಾಧಿಸಿದರೋ ಗೊತ್ತಿಲ್ಲ. ಅಂದು ನಾನೇ ಸಿಕ್ಕಿದ್ದರೆ ಏನಾಗುತ್ತಿದ್ದೆ? ನಮ್ಮ ಕುಟುಂಬ ಸದಸ್ಯರು ಸಿಕ್ಕಿದ್ದರೆ ಏನಾಗುತ್ತಿತ್ತೋ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಲಭೆ ಪ್ರಕರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮವಾಗಲಿ. ಸಂಪತ್ ರಾಜ್‍ರನ್ನು ಉಚ್ಛಾಟಿಸುವಂತೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಒತ್ತಾಯಿಸುತ್ತೇನೆ. ಮುಂದೆಯೂ ಇಂತಹವರಿಂದ ಪಕ್ಷಕ್ಕೂ ತೊಂದರೆಯೇ. ಶುಕ್ರವಾರ ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಮಾಡುತ್ತೇನೆ. ಈ ಬಗ್ಗೆ ಅವರ ಬಳಿ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಬೇಕು. ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು. ಈ ಕೃತ್ಯದ ಹಿಂದೆ ಯಾವುದೇ ಪಕ್ಷದವರು ಇದ್ದರೂ ಕ್ರಮ ಜರಗಿಸಬೇಕು.

-ರಿಝ್ವಾನ್ ಅರ್ಶದ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News