ಬಿಲ್ ಪಾವತಿ ಡಿಜಿಟಲೀಕರಣಕ್ಕೆ ಜಲಮಂಡಳಿ ನಿರ್ಧಾರ

Update: 2020-10-18 17:22 GMT

ಬೆಂಗಳೂರು, ಅ .18: ನವೆಂಬರ್ ತಿಂಗಳಿಂದ ನಗದು ಅಥವಾ ಡಿಜಿಟಲ್ ಪೇಮೆಂಟ್ ಮೂಲಕವೇ ಜಲಮಂಡಳಿಯ ನೀರಿನ ಬಿಲ್ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಚೆಕ್ ಹಾಗೂ ಡಿಡಿ ಸ್ವೀಕರಿಸಲಾಗುತ್ತಿತ್ತು. ಆದರೆ, ಪಡೆದ ಚೆಕ್ ಹಾಗೂ ಡಿಡಿಗಳು ಬ್ಯಾಂಕ್‍ನಿಂದ ತಿರಸ್ಕೃತವಾಗುತ್ತಿರುವುದರಿಂದ ಡಿಜಿಟಲೀಕರಣ ಪ್ರೋತ್ಸಾಹಿಸಲು ಜಲಮಂಡಳಿ ನಿರ್ಧರಿಸಿದೆ.

ಗೂಗಲ್ ಪೇ, ಪೇಟಿಎಂ, ಭೀಮ್, ಅಮೇಜಾನ್ ಮೇ, ಕ್ಯೂ ಆರ್ ಕೋಡ್ ಮೂಲಕ ಶುಲ್ಕ ರಹಿತವಾಗಿ ಬಿಲ್ ಪಾವತಿ ಮಾಡಬಹದು. ಹಾಗೆಯೇ ಬ್ಯಾಂಕ್ ಮೊಬೈಲ್ ಆಪ್, ಜಲಮಂಡಳಿ ಮೊಬೈಲ್ ಆಪ್ ಮೂಲಕವೂ ಬಿಲ್ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಲಮಂಡಳಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News