ಯುವ ಆಟಗಾರರ ಬಗ್ಗೆ ಧೋನಿ ಹೇಳಿಕೆಗೆ ಶ್ರೀಕಾಂತ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2020-10-20 12:21 GMT

ಚೆನ್ನೈ: ಹಿರಿಯ ಆಟಗಾರರನ್ನು ತಂಡದಿಂದ ಹೊರಕ್ಕೆ ಕಳುಹಿಸುವಂತೆ ಮಾಡುವಂತಹ ಪ್ರತಿಭೆಯನ್ನು (ಸ್ಪಾರ್ಕ್) ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡದ ಯುವ ಆಟಗಾರರು ಹೊರಗೆಡಹಿಲ್ಲ ಎಂದು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ  ಅವರ ಹೇಳಿಕೆ  ಭಾರತದ ಮಾಜಿ ಆಟಗಾರ ಕೆ ಶ್ರೀಕಾಂತ್ ಅವರಿಗೆ ಇಷ್ಟವಾಗಿಲ್ಲ. ಸೋಮವಾರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಧೋನಿ ಮೇಲಿನಂತೆ ಹೇಳಿದ್ದರೆ "ಧೋನಿ ಹೇಳಿದ್ದನ್ನು ನಾನು ಯಾವತ್ತೂ ಒಪ್ಪುವುದಿಲ್ಲ,'' ಎಂದು ಶ್ರೀಕಾಂತ್ ಹೇಳಿದ್ದಾರೆ.

"ಅವರು ಮಾತನಾಡುವ ಪ್ರಕ್ರಿಯೆಯೇ ಅರ್ಥಹೀನ. ಯಾವತೂ ಪ್ರಕ್ರಿಯೆ, ಪ್ರಕ್ರಿಯೆ ಅನ್ನುತ್ತಾರೆ, ಆದರೆ ಆಯ್ಕೆ ಪ್ರಕ್ರಿಯೆಯೇ ತಪ್ಪಾಗಿದೆ. ಜಗದೀಶನ್ ಅವರಲ್ಲಿ ಪ್ರತಿಭೆಯಿಲ್ಲ ಎನ್ನುತ್ತಾರೆ, ಆದರೆ 'ಸ್ಕೂಟರ್' ಜಾಧವ್ ಅವರಲ್ಲಿ ಅದು ಇದೆಯೇ ? ಇದು ಅರ್ಥಹೀನ, ಈ ಉತ್ತರ ನಾನು ಒಪ್ಪುವುದಿಲ್ಲ, ಈ ಪ್ರಕ್ರಿಯೆ ಕುರಿತ ಮಾತು, ಚೆನ್ನೈನ ಟೂರ್ನಮೆಂಟ್ ಮುಗಿದು ಹೋಯಿತು,'' ಎಂದರು.

"ಈಗ ಒತ್ತಡವಿಲ್ಲದೇ ಇರುವುದರಿಂದ ಯುವ ಆಟಗಾರರಿಗೆ ಅವಕಾಶ ನೀಡುವುದಾಗಿ ಹೇಳುತ್ತಿದ್ದಾರೆ. ಇದು ನನಗೆ ಅರ್ಥವೇ ಆಗುತ್ತಿಲ್ಲ, ಜಾಧವ್ ಹಾಗೂ ಪಿಯುಷ್ ಚಾವ್ಲಾ ಅವರಲ್ಲಿ ಅವರು ಎಂತಹ ಪ್ರತಿಭೆ ಕಂಡರು? ಜಗದೀಶನ್ ಅವರಲ್ಲಿ ಯಾವ ಪ್ರತಿಭೆ ಕಂಡಿಲ್ಲ?,'' ಎಂದು ಶ್ರೀಕಾಂತ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News