ಡ್ರಗ್ಸ್ ಜಾಲ: ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಎನ್‍ಸಿಬಿ ವಶಕ್ಕೆ

Update: 2020-10-20 16:57 GMT

ಬೆಂಗಳೂರು, ಅ.20: ಡ್ರಗ್ಸ್ ಮಾರಾಟ ಜಾಲ ಪ್ರಕರಣದ ತನಿಖೆ ಮುಂದುವರಿಸಿರುವ ಮಾದಕ ವಸ್ತು ನಿಗ್ರಹ ಘಟಕದ (ಎನ್‍ಸಿಬಿ) ಅಧಿಕಾರಿಗಳು, ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಅನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ರೂವಾರಿ ಎನ್ನಲಾದ ಡಿ.ಅನಿಕಾ ಎಂಬಾಕೆಯನ್ನು ಇತ್ತೀಚಿಗೆ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು. ಆಕೆ ನೀಡಿರುವ ಮಾಹಿತಿಯಂತೆ ವಿಚಾರಣೆ ಹಾಜರಾಗುವಂತೆ ಆದಂ ಪಾಷಾಗೆ ಎನ್‍ಸಿಬಿ ಸೂಚನೆ ನೀಡಿತ್ತು.

ಅದರಂತೆ ಮಂಗಳವಾರ ಬೆಳಗ್ಗೆ ಬೆಂಗಳೂರಿನ ಎನ್ ಸಿಬಿ  ಕಚೇರಿಗೆ ಹಾಜರಾಗಿದ್ದ ಆದಂ ಪಾಷಾನನ್ನು ತನಿಖಾಧಿಕಾರಿಗಳು, ವಿಚಾರಣೆ ನಡೆಸಿ ಆತನ ಹೇಳಿಕೆಗಳನ್ನು ದಾಖಲು ಮಾಡಿಕೊಂಡು, ವಶದಲ್ಲಿಟ್ಟುಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News