ಸಂಚಾರ ನಿಯಮ ಉಲ್ಲಂಘನೆ: ಒಂದೇ ವಾರದಲ್ಲಿ ಕೋಟ್ಯಂತರ ರೂ. ದಂಡ ವಸೂಲಿ

Update: 2020-10-20 16:50 GMT

ಬೆಂಗಳೂರು, ಅ.20: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರ ಮೇಲೆ ಸಂಚಾರ ಪೊಲೀಸರು ತೀವ್ರ ನಿಗಾ ಇಟ್ಟಿದ್ದು, ಒಂದೇ ವಾರದಲ್ಲಿ 4.44 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಅ.11ರಿಂದ ಅ.17ರವರೆಗೆ ಸುಮಾರು 1,06,907 ಪ್ರಕರಣ ದಾಖಲಿಸಿ 4,44,70,600 ರೂ. ದಂಡ ವಸೂಲಿ ಮಾಡಲಾಗಿದೆ  ಎಂದರು.

ವೇಗವಾಗಿ ವಾಹನ ಚಾಲನೆ 52 ಪ್ರಕರಣ-15,600 ರೂ. ದಂಡ, ಮದ್ಯದ ಅಮಲಿನಲ್ಲಿ ವಾಹನ ಚಾಲನೆ 5 ಪ್ರಕರಣ, ಕರ್ಕಶ ಶಬ್ಧ ಪ್ರಕರಣ 29-13,500 ರೂ. ದಂಡ, ನೋ ಪಾರ್ಕಿಂಗ್ 1,402 ಪ್ರಕರಣ-13,71,000 ರೂ. ದಂಡ, ಮೊಬೈಲ್ ಫೋನ್ ಬಳಕೆ 2,843 ಪ್ರಕರಣ-19,22,900 ರೂ. ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News