ಅಶ್ಲೀಲ ವೀಡಿಯೊ ನೋಡುವಂತೆ ಕಿರುಕುಳ ಆರೋಪ: ಪತಿ ವಿರುದ್ಧ ಪತ್ನಿ ದೂರು

Update: 2020-10-22 12:23 GMT

ಬೆಂಗಳೂರು, ಅ.22: ಅಶ್ಲೀಲ ವಿಡಿಯೋ ನೋಡುವಂತೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಇಲ್ಲಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಪತಿಯ ವಿರುದ್ಧ ಪತ್ನಿ ದೂರು ಸಲ್ಲಿಕೆ ಮಾಡಿದ್ದಾರೆ.

ಲತೀರ್ ಆರ್. ಎಂಬಾತನ ವಿರುದ್ಧ ಪತ್ನಿ ದೂರು ನೀಡಿದ್ದು, ಈತ 2018ರಲ್ಲಿ ವಿವಾಹವಾಗಿದ್ದು, ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಕ್ಷುಲ್ಲಕ ಕಾರಣಕ್ಕೆ ಅಶ್ಲೀಲ ವಿಡಿಯೊ ತೋರಿಸಿ ನೋಡುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದ. ಬೆದರಿಕೆವೊಡ್ಡಿ ಹಣ ವಸೂಲಿ ಮಾಡಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News