ಸಂಚಾರ ನಿಯಮ ಉಲ್ಲಂಘನೆ: ದಂಡ ವಸೂಲಿಗೆ ಪೊಲೀಸರು ಮನೆ ಬಾಗಿಲಿಗೆ

Update: 2020-10-22 16:45 GMT

ಬೆಂಗಳೂರು, ಅ.22: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಬೆಂಗಳೂರು ಸಂಚಾರ ಪೊಲೀಸರು ಮನೆಗೆ ಹೋಗಿ ದಂಡ ವಸೂಲಿ ಮಾಡುತ್ತಿದ್ದಾರೆ.

ನಗರ ಭಾಗದ ಹಲಸೂರು, ಆರ್‍ಟಿನಗರ, ಶಿವಾಜಿನಗರ, ಪುಲಕೇಶಿನಗರ, ಭಾರತಿನಗರ, ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ತೆರಳಿ ದಂಡ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಸಿಸಿಟಿವಿ ದೃಶ್ಯ ಆಧರಿಸಿ ಟಿಎಂಸಿ ಸೆಂಟರ್ ನಿಂದ ನೇರವಾಗಿ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ತದನಂತರ, ಸವಾರರ ನಿವಾಸಕ್ಕೆ ಆ ನೋಟಿಸ್ ಬರುತ್ತದೆ, ಅದನ್ನು ಸ್ವೀಕರಿಸಿ ಬೆಂಗಳೂರು ಓನ್, ಅಥವಾ ಹತ್ತಿರದ ಸಂಚಾರ ಠಾಣೆಗೆ ತೆರಳಿ ದಂಡ ಪಾವತಿಸಬೇಕು. ಇಲ್ಲದೇ ಹೋದರೆ ಪೊಲೀಸರೇ ಮನೆ ಬಾಗಿಲಿಗೆ ಬಂದು ದಂಡ ಸಂಗ್ರಹಿಸುತ್ತಾರೆ.

ಈಗಾಗಲೇ ಕೆಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ಎಎಸ್ಸೈ ಹಾಗೂ ಸಂಚಾರ ಪೇದೆ ದಂಡ ವಸೂಲಿಗೆ ಮನೆ ಬಾಗಿಲಿಗೆ ತೆರಳಿರುವುದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News