ಸಾಗರಗಳ ತಳದಲ್ಲಿ ಪ್ಲಾಸ್ಟಿಕ್ ಬೆಟ್ಟಗಳು

Update: 2020-10-22 19:30 GMT

ನಗರಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಹಾಗೂ ಸ್ಟ್ರಾಗಳನ್ನು ನಿಷೇಧಿಸಲಾಗಿದೆಯಾದರೂ ಕೊರೋನ ಸಾಂಕ್ರಾಮಿಕ ಭಯದಿಂದಾಗಿ ಬಳಸಿ ಎಸೆಯಬಹುದಾದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಎಲ್ಲೆಡೆ ವ್ಯಾಪಕವಾಗಿದೆ. ಒಂದಷ್ಟು ಸಮಯದ ಬಳಿಕ ಕೆಲವು ರೀತಿಯ ಪ್ಲಾಸ್ಟಿಕ್‌ಗಳು ಚಿಕ್ಕ ಚಿಕ್ಕ ತುಂಡುಗಳಾಗಿ ಸಾಗರದ ತಳಕ್ಕೆ ಮುಳುಗುತ್ತವೆ. ತೇಲುವ ಪ್ಲಾಸ್ಟಿಕ್‌ನ ಮೇಲೆ ಬೆಳೆಯುವ ಮೈಕ್ರೋಬ್ಸ್ ಮತ್ತು ಮಸೆಲ್ ಕಾಲನಿಗಳ ಭಾರದಿಂದಾಗಿ ಸಾಗರದ ತಳಕ್ಕೆ ಮುಳುಗುತ್ತವೆ. ಮೈಕ್ರೋ ಪ್ಲಾಸ್ಟಿಕ್‌ಗಳನ್ನು ಮೀನುಗಳು ತಿನ್ನುತ್ತವೆ. ಅವುಗಳು ಒಮ್ಮೆ ಮೀನುಗಳ ಹೊಟ್ಟೆ ಸೇರಿದವೆಂದರೆ ಬಳಿಕ ಮೈಕ್ರೋ ಪಾಸ್ಟಿಕ್‌ಗಳು ಮಾನವನ ಆಹಾರ ಸರಪಳಿಯೊಳಕ್ಕೆ ಸೇರಿಕೊಳ್ಳುತ್ತವೆ.



ವಿಶ್ವಾದ್ಯಂತ ಸಾಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ ಬಹಳ ಸಮಯದಿಂದ ಜಗತ್ತನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಒಂದೊಮ್ಮೆ ಸ್ಫಟಿಕದಂತೆ ಶುಭ್ರವಾಗಿದ್ದ ಸಾಗರ ಕಿನಾರೆಗಳ ಉದ್ದಕ್ಕೂ ತೇಲುವ ಪ್ಲಾಸ್ಟಿಕ್ ತ್ಯಾಜ್ಯಗಳು ಈಗ ಎಲ್ಲೆಡೆ ಕಂಡು ಬರುತ್ತಿರುವ ದೃಶ್ಯ.

‘ಕಾಮನ್ವೆಲ್ತ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೆೇಷನ್’ (ಸಿಎಸ್‌ಐಆರ್‌ಒ) ಇತ್ತೀಚೆಗೆ ಪ್ರಕಟಿಸಿರುವ ಹೊಸ ಅಧ್ಯಯನದ ಒಂದು ವರದಿ ಸಾಗರದ ತಳದಲ್ಲಿ ಮೈಕ್ರೋ ಪ್ಲಾಸ್ಟಿಕ್ ಅಥವಾ ಅತ್ಯಂತ ಸಣ್ಣ ಗಾತ್ರದ ಪ್ಲಾಸ್ಟಿಕ್ ತ್ಯಾಜ್ಯ ಯಾವ ಪ್ರಮಾಣದಲ್ಲಿ ಸಂಗ್ರಹವಾಗಿದೆ ಎಂಬ ಆತಂಕಕಾರಿ ವಿವರಗಳನ್ನು ಬಹಿರಂಗಪಡಿಸಿದೆ. ಸಂಶೋಧಕರ ಪ್ರಕಾರ ಇದು ಜಾಗತಿಕ ಪ್ಲಾಸ್ಟಿಕ್ ತ್ಯಾಜ್ಯದ ಮೊತ್ತ ಮೊದಲ ಅಂದಾಜು: 9.25 ಮಿಲಿಯದಿಂದ 15.87 ಮಿಲಿಯ ಟನ್‌ಗಳಷ್ಟು ಮೈಕ್ರೋ ಪ್ಲಾಸ್ಟಿಕ್ ತ್ಯಾಜ್ಯಗಳು ಸಾಗರಗಳ ಆಳದಲ್ಲಿ ಶೇಖರವಾಗಿದೆ. ಇವುಗಳ ಗಾತ್ರ 5 ಮಿಲಿಮೀಟರ್ ಮತ್ತು ಒಂದು ಮೈಕ್ರೋಮೀಟರ್‌ನಷ್ಟು ಇವೆ.

ಈ ತ್ಯಾಜ್ಯ ಸಾಗರದ ಮೇಲ್ಮೈಯಲ್ಲಿ ಇರುವುದಕ್ಕಿಂತ ಬಹಳ ಹೆಚ್ಚು ಇದೆ. ಎಷ್ಟಿದೆಯೆಂದರೆ ಅಂಟಾರ್ಟಿಕ ಹೊರತುಪಡಿಸಿ ಪ್ರತಿಯೊಂದು ಖಂಡದ ಕರಾವಳಿಯ ಪ್ರತಿಯೊಂದು ಅಡಿಗೆ ಚಿಕ್ಕಪುಟ್ಟ ಪ್ಲಾಸ್ಟಿಕ್ ಚೂರುಗಳನ್ನು ತುಂಬಿದ 18ರಿಂದ 24 ಶಾಪಿಂಗ್ ಬ್ಯಾಗ್‌ಗಳಿಗೆ ಸಮನಾಗುತ್ತದೆ.

ಈ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಪರಿಸರ ಕಾರ್ಯಕರ್ತರು ಬಹಳ ಸಮಯದಿಂದ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಮೈಕ್ರೋ ಪಾಸ್ಟಿಕ್‌ಗಳು ಸಾಗರಕ್ಕೆ ಮಾತ್ರ ಸೀಮಿತವಾದವುಗಳಲ್ಲ. ಅವುಗಳು ನಾವು ಉಸಿರಾಡುವ ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಗಾಳಿಯ ಮೂಲಕವೂ ಅವುಗಳು ಹರಡಬಲ್ಲವು.

ಪ್ರತಿ ವರ್ಷ 4.4 ಮಿಲಿಯದಿಂದ 8.8 ಮಿಲಿಯ ಟನ್‌ಗಳಷ್ಟು ಪ್ಲಾಸ್ಟಿಕ್ ಸಮುದ್ರವನ್ನು ಸೇರುತ್ತವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಕ್ಯಾಲಿಫೋರ್ನಿಯ ಮತ್ತು ಹವಾಯಿ ನಡುವೆ ಸುಳಿಯಂತೆ ಇರುವ ತ್ಯಾಜ್ಯದ ರಾಶಿಯಲ್ಲಿ 87,000 ಟನ್‌ಗಳಿಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವಿದೆ.

ಇತ್ತೀಚಿನ ವರ್ಷಗಳಲ್ಲಿ ಸಾಗರಗಳಲ್ಲಿ ಸತ್ತ ತಿಮಿಂಗಿಲಗಳ ಹೊಟ್ಟೆಯಲ್ಲಿ ನೂರಾರು ರೀತಿಯ ಪ್ಲಾಸ್ಟಿಕ್ ವಸ್ತುಗಳು ಪತ್ತೆಯಾಗಿವೆ. ನಗರಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಹಾಗೂ ಸ್ಟ್ರಾಗಳನ್ನು ನಿಷೇಧಿಸಲಾಗಿದೆಯಾದರೂ ಕೊರೋನ ಸಾಂಕ್ರಾಮಿಕ ಭಯದಿಂದಾಗಿ ಬಳಸಿ ಎಸೆಯಬಹುದಾದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಎಲ್ಲೆಡೆ ವ್ಯಾಪಕವಾಗಿದೆ. ಒಂದಷ್ಟು ಸಮಯದ ಬಳಿಕ ಕೆಲವು ರೀತಿಯ ಪ್ಲಾಸ್ಟಿಕ್‌ಗಳು ಚಿಕ್ಕ ಚಿಕ್ಕ ತುಂಡುಗಳಾಗಿ ಸಾಗರದ ತಳಕ್ಕೆ ಮುಳುಗುತ್ತವೆ. ತೇಲುವ ಪ್ಲಾಸ್ಟಿಕ್‌ನ ಮೇಲೆ ಬೆಳೆಯುವ ಮೈಕ್ರೋಬ್ಸ್ ಮತ್ತು ಮಸೆಲ್ ಕಾಲನಿಗಳ ಭಾರದಿಂದಾಗಿ ಸಾಗರದ ತಳಕ್ಕೆ ಮುಳುಗುತ್ತವೆ. ಮೈಕ್ರೋ ಪ್ಲಾಸ್ಟಿಕ್‌ಗಳನ್ನು ಮೀನುಗಳು ತಿನ್ನುತ್ತವೆ. ಅವುಗಳು ಒಮ್ಮೆ ಮೀನುಗಳ ಹೊಟ್ಟೆ ಸೇರಿದವೆಂದರೆ ಬಳಿಕ ಮೈಕ್ರೋ ಪಾಸ್ಟಿಕ್‌ಗಳು ಮಾನವನ ಆಹಾರ ಸರಪಳಿಯೊಳಕ್ಕೆ ಸೇರಿಕೊಳ್ಳುತ್ತವೆ.

ಸಿಎಸ್‌ಐಆರ್‌ಒ ವರದಿಯ ಪ್ರಕಾರ ಕೆಲವು ಆಳ ಸಾಗರ ಪದರಗಳಲ್ಲಿ ಶೂನ್ಯ ಪ್ಲಾಸ್ಟಿಕ್ ಕಣಗಳಿದ್ದರೆ ಇತರ ಪ್ರದೇಶಗಳಲ್ಲಿ ಒಂದು ಗ್ರಾಂನಲ್ಲಿ 13.6 ಕಣಗಳಿವೆ. ಇದು ಈ ಹಿಂದೆ ಕಂಡು ಬಂದದ್ದಕ್ಕಿಂತ 25 ಪಾಲು ಹೆಚ್ಚು. ಅಧ್ಯಯನ ತಂಡದ ವಿಜ್ಞಾನಿ ಬ್ರಿಟಾ ಡೆನಿಸ್ ಹಾರ್ಡೆಸ್ಟಿ ಹೇಳುವಂತೆ ಸಮಸ್ಯೆಯ ಗಾತ್ರ ಎಷ್ಟು ದೊಡ್ಡದು ಎಂದು ಜಗತ್ತಿಗೆ ತಿಳಿಸುವುದು ಈ ಅಧ್ಯಯನದ ಉದ್ದೇಶವಾಗಿದೆ. ಆಕೆಯ ಪ್ರಕಾರ ಈ ರೀತಿಯ, ಈ ಉದ್ದೇಶದ ಅಧ್ಯಯನ ನಡೆದಿರುವುದು ಇದೇ ಮೊದಲ ಬಾರಿ. ನಾವು ಬಳಸುವ ಪ್ಲಾಸ್ಟಿಕ್ ಸಾಗರದಲ್ಲಿ ಅಂತ್ಯವಾಗದಂತೆ ತಡೆಯುವುದು ನಾವು ಮಾಡಬೇಕಾದ ಮೊದಲ ಕೆಲಸ. ಸಾಗರ ಮಾಲಿನ್ಯದ ಮತ್ತು ಅದು ಭವಿಷ್ಯದಲ್ಲಿ ತಂದೊಡ್ಡಬಹುದಾದ ಸಮಸ್ಯೆಗಳ ಅರಿವು ಹೆಚ್ಚಿದಂತೆ ಮಾನವರ ವರ್ತನೆಯಲ್ಲಿ ಬದಲಾವಣೆ ಆದೀತು ಎಂಬ ಆಶಾಭಾವನೆ ಹಾರ್ಡೆಸ್ಟಿಯವರಿಗಿದೆ.
ಆಕೆ ಹೇಳುತ್ತಾರೆ: ‘‘ಸಾಗರ ಸೇರುವ ಪ್ಲಾಸ್ಟಿಕ್‌ನ ಬಹುಭಾಗ ಜನರ ಕೈಯಲ್ಲೇ ಇವೆ. ಅವರ ವರ್ತನೆ, ಅಂದರೆ ಅವರ ಕ್ರಿಯೆಗಳು ಮತ್ತು ಅವರ ಪರ್ಚೇಸಿಂಗ್ ಪವರ್ ತುಂಬಾ ಮುಖ್ಯವಾಗಿದೆ. ಆದ್ದರಿಂದ ಅವರು ತಮ್ಮ ವರ್ತನೆಯಲ್ಲಿ ಬದಲಾವಣೆ ತಂದರೆ ಆಗ ಸಾಗರ ಮಾಲಿನ್ಯದ ಸಮಸ್ಯೆಯೂ ಪರಿಹಾರವಾಗಬಹುದು.’’

 ಕೃಪೆ: nytimes.com          

Writer - ಟಿಫಾನಿ ಮೇ

contributor

Editor - ಟಿಫಾನಿ ಮೇ

contributor

Similar News