ಬೆಂಗಳೂರು: ಮದ್ಯದ ಅಮಲಿನಲ್ಲಿ ಪತ್ನಿಯ ಕೊಲೆ

Update: 2020-10-26 18:02 GMT

ಬೆಂಗಳೂರು, ಅ.26: ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಲೆಗೈದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಬನ್ನೇರುಘಟ್ಟ ಬಳಿಯ ಬನ್ನಹಳ್ಳಿ ನಿವಾಸಿ ಕುಮಾರ್ ಎಂಬಾತ ಈ ಕೃತ್ಯವೆಸಗಿದ್ದು, ಆತನ ಪತಿ ಗೌರಮ್ಮ ಎಂಬಾಕೆ ಕೊಲೆಯಾದ ಮಹಿಳೆ ಎನ್ನಲಾಗಿದೆ.

ಕೂಲಿಕಾರ್ಮಿಕ ಆಗಿರುವ ಕುಮಾರ್, ಮದ್ಯ ಸೇವನೆ ಮಾಡಿ ಪ್ರತಿ ದಿನ ಪತ್ನಿ ಗೌರಮ್ಮ ಅವರೊಂದಿಗೆ ಜಗಳವಾಡುತ್ತಿದ್ದ. ಇದೇ ವಿಚಾರಕ್ಕೆ ರವಿವಾರವೂ ಈ ಇಬ್ಬರ ಗಲಾಟೆ ನಡೆದಿದ್ದು, ಈ ವೇಳೆ ಕುಮಾರ್, ಗೌರಮ್ಮ ಮೇಲೆ ಹಲ್ಲೆ ನಡೆಸಿ ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News