ಜೂಜಾಟ ಆರೋಪ: 7 ಪೊಲೀಸರ ಪೊಲೀಸ್ ವಿರುದ್ಧ ಎಫ್ಐಆರ್

Update: 2020-10-27 16:56 GMT

ಬೆಂಗಳೂರು, ಅ.27: ಕರ್ತವ್ಯ ಬಿಟ್ಟು ಹೋಟೆಲ್‍ವೊಂದರಲ್ಲಿ ಇಸ್ಪೀಟ್ ಆಡುತ್ತಿದ್ದ ಆರೋಪದಡಿ ಪೊಲೀಸ್ ಸಿಬ್ಬಂದಿ ಮೇಲೆ ಎಫ್‍ಐಆರ್ ದಾಖಲಾಗಿದೆ.

ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಹೋಟೆಲ್ ಮೇಲೆ ದಾಳಿ ನಡೆಸಿ ಪುಟ್ಟೇನಹಳ್ಳಿ ಠಾಣೆಯ 7 ಪೊಲೀಸರ ವಿರುದ್ಧವೇ ಎಫ್‍ಐಆರ್ ದಾಖಲಿಸಿದೆ ಎಂದು ವರದಿಯಾಗಿದೆ.

ದಾಳಿ ವೇಳೆ 7 ಪೊಲೀಸ್ ಸಿಬ್ಬಂದಿ ಇಸ್ಪೀಟ್ ಹಣದ ಸಮೇತ ಸಿಕ್ಕಿಬಿದ್ದಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News