'ಮಾಸ್ಕ್' ದಂಡ ವಸೂಲಿಗೆ ಮಾರ್ಷಲ್‍ಗಳಿಗೆ ಟಾರ್ಗೆಟ್: ಸಾರ್ವಜನಿಕರ ಆಕ್ರೋಶ

Update: 2020-10-27 17:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.27: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಮ ಪಾಲಿಸದವರಿಂದ ದಂಡ ವಸೂಲಿ ಮಾಡಲು ನೇಮಿಸಲಾಗಿರುವ ಮಾರ್ಷಲ್‍ಗಳಿಗೆ ದಿನಕ್ಕೆ ಇಷ್ಟು ಕೇಸ್ ಹಾಕಲೇಬೇಕು, ದಂಡ ವಸೂಲಿ ಮಾಡಲೇಬೇಕು ಎಂದು ಅಧಿಕಾರಿಗಳು ಟಾರ್ಗೆಟ್ ನೀಡಿದ್ದು, ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವಿಧಾನಸಭಾ ಕ್ಷೇತ್ರದೊಳಗೆ ದಿನಕ್ಕೆ ಕನಿಷ್ಠ 20 ಕೇಸ್ ಹಾಕಲೇಬೇಕು ಮತ್ತು ದಂಡ ವಸೂಲಿ ಮಾಡಲೇಬೇಕೆಂದು ಮಾರ್ಷಲ್‍ಗಳಿಗೆ ಟಾರ್ಗೆಟ್ ನಿಗದಿ ಮಾಡಲಾಗಿದೆ. ಟಾರ್ಗೆಟ್ ತಲುಪಲು ವಿಫಲವಾಗಿರುವ ಮಾರ್ಷಲ್‍ಗಳಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

ಸೂಚನೆ ಕೊಟ್ಟರೂ ಪದೇ ಪದೆ ನೀವು ಟಾರ್ಗೆಟ್ ತಲುಪುವಲ್ಲಿ ವಿಫಲರಾಗಿದ್ದೀರಿ. ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಕೋವಿಡ್ ವಿಭಾಗೀಯ ಸಂಯೋಜನಾಧಿಕಾರಿ ಮನೀಶ್ ಮೌದ್ಗಿಲ್ ನೋಟಿಸ್ ನೀಡಿದ್ದಾರೆ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ ಕೋವಿಡ್ ವಿಭಾಗೀಯ ಸಂಯೋಜನಾಧಿಕಾರಿ ಮನೀಶ್ ಮೌದ್ಗಿಲ್ ಅವರು 'ಬಿಬಿಎಂಪಿಯಲ್ಲಿ ಪ್ರತಿ ವಾರ್ಡ್ ಗೆ ಒಬ್ಬ ಮಾರ್ಷಲ್ ಇದ್ದಾರೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ 6-7 ವಾರ್ಡ್ ಗಳು ಬರುತ್ತವೆ. ಆ ಪ್ರಕಾರ ಒಂದು ವಿಧಾನಸಭಾ ಕ್ಷೇತ್ರದಲ್ಲಿ ದಿನಕ್ಕೆ 120 ರಿಂದ 140 ಕೇಸ್ ಹಾಕಬೇಕು ಎಂದು ಮಾರ್ಷಲ್‍ಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News