ರಾಜಧಾನಿಯಲ್ಲಿ 1,874 ಕೊರೋನ ಪ್ರಕರಣ ದೃಢ: 24 ಮಂದಿ ಮೃತ್ಯು

Update: 2020-10-27 17:43 GMT

ಬೆಂಗಳೂರು, ಅ.27: ನಗರದಲ್ಲಿ ಮಂಗಳವಾರದಂದು 1,874 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. 4,446 ಸೋಂಕಿತರು ಬಿಡುಗಡೆಯಾಗಿದ್ದು, 24 ಜನರು ಮೃತರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರಗೆ ಒಟ್ಟು 3,29,250 ಕೊರೋನ ಸೋಂಕಿತರು ದೃಢಪಟ್ಟಿದ್ದು, 3,778 ಜನರು ಸೋಂಕಿಗೆ ಬಲಿಯಾಗಿದ್ದಾರೆ. 2,78,843 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 46,628 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರದ ಬಿಬಿಎಂಪಿ ಕೋವಿಡ್ ವರದಿ ಪ್ರಕಾರ ನಗರದಲ್ಲಿ ಒಟ್ಟು ಸಕ್ರಿಯ 18 ಕಂಟೈನ್ಮೆಂಟ್ ಝೋನ್‍ಗಳಿವೆ. ನಗರದಲ್ಲಿ 9,66,253 ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ದ್ವಿತೀಯ ಸಂಪರ್ಕಿತ 11,28,330 ಜನರನ್ನು ಗುರುತಿಸಲಾಗಿದೆ.

ನಗರದಲ್ಲಿ ಇಲ್ಲಿಯವರೆಗೆ 26,58,373 ಜನರಿಗೆ ಕೊರೋನ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪಾಸಿಟಿವ್ ಪ್ರಮಾಣ ಶೇ.12.08ರಷ್ಟಿದೆ. ಕೊರೋನಕ್ಕೆ ಮೃತರಾಗುತ್ತಿರುವ ಪ್ರಮಾಣ ಶೇ.1.15ರಷ್ಟಿದ್ದು, ಗುಣಮುಖರಾಗುತ್ತಿರುವ ಪ್ರಮಾಣ ಶೇ.81.17ರಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News