×
Ad

ವಾಹನದಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ: ಬಿಬಿಎಂಪಿ ಆದೇಶ

Update: 2020-10-27 23:14 IST

ಬೆಂಗಳೂರು, ಅ.27: ಕಾರಿನಲ್ಲಿ ಅಥವಾ ಬೈಕ್‍ನಲ್ಲಿ ಒಬ್ಬರೇ ಇದ್ದೇವೆ ಎಂದು ಮಾಸ್ಕ್ ಧರಿಸದೆ ಸಂಚರಿಸುವಂತಿಲ್ಲ. ಒಬ್ಬರೇ ಇದ್ದರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಲೇಬೇಕೆಂದು ಬಿಬಿಎಂಪಿ ಆದೇಶ ಹೊರಡಿಸಿದೆ.

ಮಾಸ್ಕ್ ಧರಿಸುವ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸ್ಪಷ್ಟ ಆದೇಶ ಹೊರಡಿಸಿದ್ದು, ತಿನ್ನುವಾಗ, ಕುಡಿಯುವಾಗ, ಈಜುವಾಗ ಮಾತ್ರ ಮಾಸ್ಕ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಒಬ್ಬರಿಗಿಂತ ಹೆಚ್ಚು ಜನ ನಿಂತು ಮಾತನಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News