ಬಿಜೆಪಿಗೆ ಕೈಕೊಟ್ಟು ಆರ್ ಜೆಡಿಯೊಂದಿಗೆ ಕೈಜೋಡಿಸಲು ನಿತೀಶ್ ಕುಮಾರ್ ಸಿದ್ದತೆ: ಪಾಸ್ವಾನ್

Update: 2020-10-28 12:22 GMT

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭೆಯ ಚುನಾವಣೆಯ ಬಳಿಕ ಬಿಜೆಪಿಯನ್ನು ತೊರೆದು ಆರ್ ಜೆಡಿ ಜೊತೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ ಎಂದು ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬುಧವಾರ ಟ್ವೀಟಿಸಿದ್ದಾರೆ.

"ಈ ಹಿಂದೆ ಆರ್ ಜೆಡಿ ಆಶೀರ್ವಾದದೊಂದಿಗೆ ನಿತೀಶ್ ಕುಮಾರ್ ಸರಕಾರ ರಚಿಸಿದ್ದರು. ನಿತೀಶ್ ಕುಮಾರ್ ಗೆ ನೀಡುವ ಒಂದೊಂದು ಮತವು ಬಿಹಾರವನ್ನು ದುರ್ಬಲಗೊಳಿಸುವುದು ಮಾತ್ರವಲ್ಲ, ಆರ್ ಜೆಡಿ ಹಾಗೂ ಅದರ ಮಹಾ ಮೈತ್ರಿಯನ್ನು ಗಟ್ಟಿಗೊಳಿಸುತ್ತದೆ. ಅವರು ಚುನಾವಣೆಯ ಬಳಿಕ ಬಿಜೆಪಿಯನ್ನು ತೊರೆದು ಆರ್ ಜೆಡಿ ಸೇರಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಕಳೆದ 15 ವರ್ಷಗಳಲ್ಲಿ ಬಿಹಾರದ ಹೆಸರು ಕೆಟ್ಟುಹೋಗಿದೆ. ಇದೀಗ ನಿಮ್ಮೆಲ್ಲರ ಆಶೀರ್ವಾದ ದಿಂದ ಬಿಹಾರಿಯನ್ನು ಮೊದಲ ಸ್ಥಾನಕ್ಕೆ ತಲುಪಿಸಿ ನಿತೀಶ್ ಮುಕ್ತ ಸರಕಾರವನ್ನು ರಚಿಸಬೇಕಾಗಿದೆ. ಎಲ್ ಜೆಪಿ ನಿತೀಶ್ ಕುಮಾರ್ ಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ''  ಎಂದು ಚಿರಾಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News