ನಿರ್ದೇಶಕನನ್ನು ಬೆದರಿಸಿ ಚೆಕ್‍ಗೆ ಸಹಿ ಪಡೆದ ಆರೋಪ: ಇನ್‍ಸ್ಪೆಕ್ಟರ್ ವಿರುದ್ಧ ಬಂಧನ ವಾರೆಂಟ್ ಜಾರಿ

Update: 2020-10-28 14:07 GMT

ಬೆಂಗಳೂರು, ಅ.28: ಸಿನೆಮಾ ನಿರ್ದೇಶಕನಿಗೆ ಬೆದರಿಸಿ ಚೆಕ್‍ಗಳಿಗೆ ಸಹಿ ಪಡೆದ ಆರೋಪದ ಹಿನ್ನೆಲೆಯಲ್ಲಿ ನೆಲಮಂಗಲ ಪೊಲೀಸ್ ಠಾಣೆ ಸಬ್ ಇನ್‍ಸ್ಪೆಕ್ಟರ್(ಪಿಎಸ್ಸೈ) ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.

ನಗರದ 24ನೆ ಎಸಿಎಂಎಂ ಕೋರ್ಟ್ ಪೊಲೀಸ್ ಆಯುಕ್ತರ ಮೂಲಕ ಸಬ್ ಇನ್‍ಸ್ಪೆಕ್ಟರ್ ಮಂಜುನಾಥ ಹಾಗೂ ಕಾನ್‍ಸ್ಟೇಬಲ್ ಕೇಶವ್ ವಿರುದ್ಧ ವಾರಂಟ್ ಜಾರಿಗೊಳಿಸಲು ಆದೇಶ ನೀಡಿದೆ ಎಂದು ವರದಿಯಾಗಿದೆ.

ಮಂಜುನಾಥ, ಪತಿ ಬೇಕು ಡಾಟ್ ಕಾಂ ಸಿನೆಮಾಗೆ ಬಂಡವಾಳ ಹೂಡಿದ್ದು ಸಿನಿಮಾ ನಷ್ಟ ಅನುಭವಿಸಿದ್ದರಿಂದ ನಿರ್ದೇಶಕ ರಾಕೇಶ್‍ಗೆ ಹಣ ಹಿಂದಿರುಗಿಸಲು ಒತ್ತಡ ಹೇರಿದ್ದಾರೆ. ಅಷ್ಟೇ ಅಲ್ಲದೆ, ನೆಲಮಂಗಲ ಪೊಲೀಸ್ ಠಾಣೆಗೆ ಕರೆಸಿಕೊಂಡು ಬೆದರಿಸಿ ಚೆಕ್‍ಗೆ ಸಹಿ ಪಡೆದಿದ್ದರು. ಹೀಗಾಗಿ ಪೊಲೀಸರ ವಿರುದ್ಧ ರಾಕೇಶ್ ಖಾಸಗಿ ದೂರು ಸಲ್ಲಿಸಿದ್ದರು. ಆದರೆ ಸಮನ್ಸ್ ನೀಡಿದರೂ ಪೊಲೀಸರು ಕೋರ್ಟ್‍ಗೆ ಹಾಜರಾಗಿರಲಿಲ್ಲ. ವಾರಂಟ್ ಜಾರಿಗೊಳಿಸುವಂತೆ ವಕೀಲ ವೇದಮೂರ್ತಿ ವಾದ ಮಂಡಿಸಿದ್ದರು ಎನ್ನಲಾಗಿದ್ದು, ಸದ್ಯ ಎಸಿಎಂಎಂ ಕೋರ್ಟಿನ ನ್ಯಾಯಾಧೀಶರು ವಾರಂಟ್ ಜಾರಿಗೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News