ಚರಡಪ್ಪ ನಾಯ್ಕ
Update: 2020-10-28 21:53 IST
ಉಡುಪಿ, ಅ.28: ಅಲೆವೂರು ನಿವಾಸಿ ಜಡ್ಡು ಚರಡಪ್ಪ ನಾಯ್ಕ ಇವರು ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಕೇಂದ್ರ ಸರಕಾರದ ಆಹಾರ ಮತ್ತು ಉದ್ಯಮ ನಿಗಮದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದರು. ನಾಯ್ಕ ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನಿವೃತ್ತಿಯ ನಂತರ ‘ಆರಂಭಿಕ ತುಳುನಾಡಿನಲ್ಲಿ ಮರಾಠರು’ ಎಂಬ ಅಧ್ಯಯನ ಗ್ರಂಥವನ್ನು ಮೂರು ಭಾಗಗಳಲ್ಲಿ ರಚಿಸಿ ಮರಾಠರ ಸಂಸ್ಕೃತಿ, ಸಂಸ್ಕಾರ, ಭಾಷೆ ಹಾಗೂ ಮೂಲ ಇತಿಹಾಸದ ಕುರಿತು ಸಮಾಜದ ಜನರಿಗೆ ಮಾಹಿತಿ ನೀಡಿದ್ದರು. ‘ಹೋಲಿ’ ಇವರು ರಚಿಸಿದ ಇನ್ನೊಂದು ಕೃತಿಯಾಗಿದೆ.