77 ಬಾರಿ ಸಂಚಾರ ನಿಯಮ ಉಲ್ಲಂಘನೆ: ಬೈಕ್ ಸವಾರನಿಗೆ ವಿಧಿಸಿದ ದಂಡದ ಮೊತ್ತ ಎಷ್ಟು ಗೊತ್ತೇ ?
Update: 2020-10-30 18:11 IST
ಬೆಂಗಳೂರು, ಅ.30: 77 ಬಾರಿ ಸಂಚಾರ ನಿಯಮವನ್ನು ಉಲ್ಲಂಘಿಸಿದ ಆರೋಪದಡಿ ಬೈಕ್ ಮಾಲಕನಿಗೆ 42,500 ರೂ.ಗಳ ದಂಡವನ್ನು ಇಲ್ಲಿನ ಮಡಿವಾಳ ಸಂಚಾರ ಠಾಣಾ ಪೊಲೀಸರು ವಿಧಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸಂಚಾರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ವೇಳೆ ಬೈಕ್ ಸವಾರ ಅರುಣ್ ಕುಮಾರ್ ಸಿಕ್ಕಿ ಬಿದ್ದಿದ್ದು, ಪೊಲೀಸ್ ಇನ್‍ಸ್ಪೆಕ್ಟರ್ ನವೀನ್ ಕುಮಾರ್ ಮತ್ತು ಪಿಎಸ್ಸೈ ಶಿವರಾಜ್ ಕುಮಾರ್ ಅವರು ದಂಡ ಪರಿಶೀಲನೆ ನಡೆಸಿ ಅರುಣ್ ಕುಮಾರ್ ಗೆ 42,500 ರೂ. ದಂಡ ವಿಧಿಸಿ ನೋಟಿಸ್ ನೀಡಿ ಬೈಕ್ ವಶಕ್ಕೆ ಪಡೆದಿದ್ದಾರೆ.