ಮಾಸ್ಕ್ ನಿಯಮ ಉಲ್ಲಂಘನೆ: 3.5 ಕೋಟಿ ರೂ. ಗಳಷ್ಟು ದಂಡ ಸಂಗ್ರಹ

Update: 2020-10-30 14:18 GMT

ಬೆಂಗಳೂರು, ಅ.30: ನಗರದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೂ, ಮಾಸ್ಕ್ ಧರಿಸದೇ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ 1,59,448 ಪ್ರಕರಣಗಳು ವರದಿಯಾಗಿವೆ. ಮಾಸ್ಕ್ ನಿಯಮ ಉಲ್ಲಂಘನೆ ಮಾಡುವವರಿಗೆ ಮಾರ್ಷಲ್‍ಗಳು ತಲಾ 200 ರೂ ದಂಡ ವಿಧಿಸುತ್ತಿದ್ದು, ಸೆ.26ರವರೆಗೆ ಸುಮಾರು 3.5 ಕೋಟಿ ರೂ.ಗಳಷ್ಟು ದಂಡ ಸಂಗ್ರಹಿಸಲಾಗಿದೆ. ಮಾಸ್ಕ್ ನಿಯಮ ಉಲ್ಲಂಘನೆ ಮಾಡುವವರ ಮೇಲೆ ದಂಡ ವಿಧಿಸಲು ಪ್ರಾರಂಭವಾದಾಗಿನಿಂದ ಇದುವರೆಗೂ ಒಟ್ಟು 3,53,40,819 ರೂ.ದಂಡ ಸಂಗ್ರಹವಾಗಿದೆ.

ಸುರಕ್ಷಿತ ಅಂತರ ಕಾಪಾಡಿಕೊಳ್ಳದ 18,239 ಜನರಿಂದ 39.19 ಲಕ್ಷ ರೂ. ದಂಡ ಸಂಗ್ರಹ ಮಾಡಲಾಗಿದೆ. ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಒಟ್ಟು ಪ್ರಕರಣಗಳ ಸಂಖ್ಯೆ 1,77,687ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ದಂಡ ಸಂಗ್ರಹ 3.92 ಕೋಟಿ ಸಂಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News