×
Ad

ಬೆಂಗಳೂರು: ನಗರದಲ್ಲಿ ಸೋಂಕು ಹರಡುವುದು ತಡೆಯಲು ಪ್ರತ್ಯೇಕ ಸಮಿತಿ ರಚನೆ

Update: 2020-10-30 21:16 IST

ಬೆಂಗಳೂರು, ಅ.30: ನಗರದಲ್ಲಿ ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಹಾಗೂ ಮಾಸ್ಕ್ ಮತ್ತು ಸುರಕ್ಷಿತ ಅಂತರ ನಿಯಮ ಉಲ್ಲಂಘನೆಯನ್ನು ತಡೆಯುವ ಉದ್ದೇಶದಿಂದ ವಾರ್ಡ್, ವಿಭಾಗ, ವಲಯ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯ ಅಧಿಕಾರಿಗಳನ್ನು ಒಳಗೊಂಡ ನಾಲ್ಕು ಪ್ರತ್ಯೇಕ ಸಮಿತಿಗಳನ್ನು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ರಚನೆ ಮಾಡಿದ್ದಾರೆ.

ಕೋವಿಡ್ ತಡೆ ತಾಂತ್ರಿಕ ಕಾರ್ಯ ಪಡೆಯ ಸಲಹೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಟ್ಟದಲ್ಲಿ ನಡೆದ ಚರ್ಚೆಗಳು ಹಾಗೂ ಸಲಹೆಗಳ ಆಧಾರದ ಮೇಲೆ ನಾಲ್ಕು ಕಮಿಟಿಗಳನ್ನು ರಚನೆ ಮಾಡಲಾಗಿದೆ. ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಮತ್ತಷ್ಟು ಕಟ್ಟುನಿಟ್ಟಾಗಿ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಾರ್ಡ್ ಕಮಿಟಿ, ವಿಭಾಗೀಯ ಮಟ್ಟದ ಸಮಿತಿ, ವಲಯ ಮಟ್ಟದ ಸಮಿತಿ, ಕೇಂದ್ರ ಕಚೇರಿ ಸಮಿತಿ ಮಾಡಲಾಗಿದೆ. ಈ ಸಮಿತಿಗಳಲ್ಲಿ ಆರೋಗ್ಯಾಧಿಕಾರಿಗಳು, ಮಾರ್ಷಲ್‍ಗಳು, ಪೊಲೀಸ್ ಸಿಬ್ಬಂದಿ, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‍ಗಳು ಸಮಿತಿಗಳಲ್ಲಿ ಕೆಲಸ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಕಾರು ಚಲಾಯಿಸುವ ಸಂದರ್ಭದಲ್ಲಿ ಹಾಗೂ ಕಾರಿನ ಗಾಜು ಮುಚ್ಚಿದ ಸಂದರ್ಭದಲ್ಲಿ ಒಬ್ಬರೇ ಕಾರು ಚಲಾಯಿಸುವಾಗ, ಪಾರ್ಕಿಂಗ್ ವೇಳೆ, ಒಬ್ಬರೇ ಬೈಕ್ ಚಲಾಯಿಸುವಾಗ ಸೇರಿದಂತೆ ಎಲ್ಲ ಸಂದರ್ಭಗಳಲ್ಲೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News