ನ.8ರವರೆಗೆ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮೇಳ

Update: 2020-10-30 18:08 GMT

ಬೆಂಗಳೂರು, ಅ.30: ಕರ್ನಾಟಕ ಚಿತ್ರಕಲಾ ಪರಿಷತ್ ಮತ್ತು ಗ್ರಾಂಡ್ ಪ್ಲೀ ಮಾರ್ಕೆಟ್ ಸಂಸ್ಥೆಯ ಸಹಯೋಗದಲ್ಲಿ ಅ.30ರಿಂದ ನ.8ರವರೆಗೆ ಬೆಂಗಳೂರು ಉತ್ಸವ ಎಂಬ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ.

ಪ್ರತಿದಿನ ಬೆಳಗ್ಗೆ 11ರಿಂದ 7ರವರೆಗೆ ನಡೆಯುವ ಪ್ರದರ್ಶನದಲ್ಲಿ ದೀಪಾವಳಿಯ ಹಿನ್ನೆಲೆಯಲ್ಲಿ ತಯಾರಿಗೊಂಡಿರುವ ಆಕರ್ಷಣೆ ದೀಪಗಳು, ಮಣ್ಣಿನ ದೀಪಗಳು, ಲೋಹದ ದೀಪಗಳು ಸೇರಿದಂತೆ ರಾಜಸ್ಥಾನ, ಕಾಶ್ಮೀರ, ಒರಿಸ್ಸಾ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದ ಕುಶಲಕರ್ಮಿಗಳು ತಯಾರಿಸಿದ ದೀಪಗಳು ಪ್ರದರ್ಶನದಲ್ಲಿವೆ.

ಹ್ಯಾಂಡ್‍ಲೂಮ್‍ಗಳು, ಕರಕುಶಲ ವಸ್ತುಗಳು, ಬಟ್ಟೆ, ಸೀರೆ, ಮರದ ಆಟಿಕೆಗಳು, ಪೀಟೋಪಕರಣಗಳು, ಪಿಂಗಾಣಿಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು 70ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶಿಸಲಾಗಿದೆ. ಮೇಳದಲ್ಲಿ ಕಲಾವಿದರುಗಳು ಮಣ್ಣು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News