ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಕ್ಷಮೆಯಾಚನೆಗೆ ಆಗ್ರಹ

Update: 2020-10-31 16:24 GMT
ಉಸ್ಮಾನ್ ಶರೀಫ್

ಬೆಂಗಳೂರು, ಅ.31: ಇಸ್ಲಾಮ್ ಕುರಿತು ಆಧಾರರಹಿತ ಆರೋಪಗಳನ್ನು ಮಾಡಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಸುನ್ನಿ ಜಮೀಯತ್-ಉಲ್-ಉಲಮಾ ಸಂಘಟನೆ ಆಗ್ರಹಿಸಿದೆ.

ಶನಿವಾರ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಶರೀಫ್, ಇಸ್ಲಾಮ್ ಧರ್ಮದ ಪ್ರಚಾರ ಹರಿತವಾದ ಖಡ್ಗ ಆಯುಧಗಳಿಂದ ನಡೆದಿಲ್ಲ. ಬದಲಾಗಿ ಅದು ಶಾಂತಿ ಮತ್ತು ನೆಮ್ಮದಿಯ ತಳಹದಿಯಲ್ಲಿ ನಿಂತಿದೆ ಎಂದು ನುಡಿದರು.

ಫ್ರಾನ್ಸ್ ನಲ್ಲಿ ಶಿಕ್ಷಕನ ಮೇಲೆ ನಡೆದ ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ. ಆದರೆ, ಅದನ್ನೇ ಗುರಿಯಾಗಿಸಿಕೊಂಡು ಇಸ್ಲಾಮ್ ಧರ್ಮದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಅಲ್ಲದೆ, ಅಲ್ಲಿನ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್ ಮುಸ್ಲಿಮರ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದರು.

ಧರ್ಮದ ಹೆಸರಿನಲ್ಲಿ ಯಾರು ಸಹ ರಾಜಕೀಯ ಮಾಡುವುದು ಸರಿಯಲ್ಲ ಎಂದ ಅವರು, ಪ್ರತಿ ಯೊಬ್ಬರು ಅನ್ಯ ಧರ್ಮವನ್ನು ಪ್ರೀತಿಸು ವಂತಾಗಬೇಕು. ಈ ನಿಟ್ಟಿನಲ್ಲಿ ಇಮಾನ್ಯುಯೆಲ್ ಮ್ಯಾಕ್ರೋನ್ ಕ್ಷಮೆಯಾಚಿಸುವಂತೆ ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News