×
Ad

ಅರ್ಹ ಸಾಧಕನಿಗೆ ರಾಜ್ಯೋತ್ಸವ ಪ್ರಶಸ್ತಿ: ಝಿಯಾವುಲ್ಲಾ ಖಾನ್

Update: 2020-10-31 21:39 IST
ಮಣೆಗಾರ್ ಮೀರಾನ್ ಸಾಹೇಬ್

ಬೆಂಗಳೂರು, ಅ.31: ಸಮಾಜ ಸೇವೆ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮಣೆಗಾರ್ ಮೀರಾನ್ ಸಾಹೇಬ್ ಅವರನ್ನು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಬೆಂಗಳೂರು ಪೂರ್ವ ತಾಲೂಕು ಫೆಡರೇಶನ್ ಆಫ್ ಮಸಾಜಿದ್ ಹಾಗೂ ಮದಾರಿಸ್ ಸಂಘಟನೆಯ ಅಧ್ಯಕ್ಷ ಝಿಯಾವುಲ್ಲಾ ಖಾನ್ ತಿಳಿಸಿದ್ದಾರೆ.

ಮಸೀದಿಗಳು, ಮದ್ರಸಾಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುವ ಮೂಲಕ, ಬಡವರು, ಆರ್ಥಿಕವಾಗಿ ಹಿಂದುಳಿದಿರುವವರ ಸಬಲೀಕರಣಕ್ಕೆ ಶ್ರಮಿಸಿದ್ದಾರೆ. ಅವರ ಸಮಾಜ ಸೇವೆಯನ್ನು ಗುರುತಿಸಿ ಸರಕಾರ ಅರ್ಹ ಸಾಧಕನಿಗೆ ಪ್ರಶಸ್ತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಪೂರ್ವ ತಾಲೂಕು ಫೆಡರೇಶನ್ ಆಫ್ ಮಸಾಜಿದ್ ಹಾಗೂ ಮದಾರಿಸ್ ಸಂಘಟನೆ, ಮಸ್ಜಿದೆ ಉಮ್ಮುಲ್ ಹಸ್ನೈನ್, ಸಿಲಿಕಾನ್ ಸಿಟಿ ಪಬ್ಲಿಕ್ ಶಾಲೆ ಹಾಗೂ ಪ್ರಿಸ್ಟೀನ್ ಪಬ್ಲಿಕ್ ಶಾಲೆ ಪರವಾಗಿ ಮಣೆಗಾರ್ ಮೀರಾನ್ ಸಾಹೇಬ್ ಅವರಿಗೆ ಅಭಿನಂದನೆಗಳು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News