ವಿಯೆನ್ನಾ ದಲ್ಲಿ ಸೋತರೂ ಜೊಕೊವಿಕ್ ನಂ.1

Update: 2020-11-02 18:53 GMT

ಪ್ಯಾರಿಸ್, ನ.2: ಕಳೆದ ವಾರ ವಿಯೆನ್ನಾ ಓಪನ್‌ನಲ್ಲಿ ಲೊರೆಂಜೊ ಸೋನೆಗೊ ವಿರುದ್ಧ ಸೋಲು ಅನುಭವಿಸಿದರೂ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರ ಸ್ಥಾನದಲ್ಲಿ ಬದಲಾವಣೆಯಾಗಿಲ್ಲ. ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ರೋಲ್ಯಾಂಡ್ ಗ್ಯಾರೋಸ್ ನಂತರ ಆಡದ ಜೊಕೊವಿಕ್ ಆಸ್ಟ್ರಿಯದಲ್ಲಿ ಕಣಕ್ಕಿಳಿದಿದ್ದರು. ವಿಶ್ವದ ನಂ.1 ಆಟಗಾರನಾಗಿ ಜೊಕೊವಿಕ್ 293 ವಾರಗಳನ್ನು ಕಳೆದಿದ್ದಾರೆ. ರೋಜರ್ ಫೆಡರರ್(310) ದಾಖಲೆಯನ್ನು ಸರಿಗಟ್ಟುವ ಹಾದಿಯಲ್ಲಿದ್ದಾರೆ. 17 ಬಾರಿ ಗ್ರಾನ್ ಸ್ಲಾಮ್ ವಿಜೇತ ಜೊಕೊವಿಕ್ ಅವರು ಆರನೇ ಬಾರಿ ಅಗ್ರ ಸ್ಥಾನದೊಂದಿಗೆ ಕೊನೆ ಗೊಳಿಸುವ ಮೂಲಕ ಪೀಟ್ ಸಾಂಪ್ರಾಸ್ ದಾಖಲೆಯನ್ನು ಸರಿಗಟ್ಟುವುದು ಬಹುತೇಕ ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News