ನಿರುದ್ಯೋಗಿ ಯುವಕರಿಗಾಗಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Update: 2020-11-03 18:10 GMT

ಬೆಂಗಳೂರು, ನ.3: ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ಮರ ಮತ್ತು ಕಲ್ಲುಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ ವಿಭಾಗಗಳಲ್ಲಿ ಉಚಿತ ತರಬೇತಿ ನೀಡಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಬಿಡದಿಯಲ್ಲಿ ಈ ಕರಕುಶಲ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಈ ಸಂಸ್ಥೆ ಇದುವರೆಗೆ ಒಟ್ಟಾರೆ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಲ್ಪಕಲಾ ಶಿಕ್ಷಣವನ್ನು ನೀಡಿದೆ. ಇದರಲ್ಲಿ ಶೇಖಡ 92 ರಷ್ಟು ವಿದ್ಯಾರ್ಥಿಗಳು ಲಾಭದಾಯಕ ಹುದ್ದೆಯಲ್ಲಿದ್ದಾರೆ. ಹಲವಾರು ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನವಾಗಿದ್ದಾರೆ.

ಮರ ಮತ್ತು ಕಲ್ಲುಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ ತರಬೇತಿಯ ಅವಧಿಯು 18 ತಿಂಗಳಾಗಿದ್ದು, ಕುಂಭಕಲೆ (ಟೆರಾ ಕೋಟಾ) ವಿಭಾಗದ ತರಬೇತಿ ಅವಧಿಯು 6 ತಿಂಗಳಾಗಿರುತ್ತದೆ. ಅಭ್ಯರ್ಥಿಗಳು ಕನಿಷ್ಠ 7 ನೇ ತರಗತಿ ತೇರ್ಗಡೆ ಹೊಂದಿದ್ದು, 18 ರಿಂದ 25 ವರ್ಷದೊಳಗಿರಬೇಕು. ತರಬೇತಿ ಅವಧಿಯಲ್ಲಿ ಊಟ, ವಸತಿ, ಸಮವಸ್ತ್ರ, ಕಂಪ್ಯೂಟರ್ ಶಿಕ್ಷಣ, ಉಪಕರಣಗಳು/ಕಚ್ಚಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು. ಅಭ್ಯರ್ಥಿಗಳಿಗೆ ತರಬೇತಿ ಅಂಗವಾಗಿ ಉಚಿತ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ವಿಳಾಸ: ನಿರ್ದೇಶಕರು, ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆ, ಜೊಗರದೊಡ್ಡಿ, ಬಿಡದಿ ನಿರ್ದೇಶಕ ಅವರನ್ನು ಸಂಪರ್ಕಿಸಬಹುದಾಗಿದೆ. ಸಂಸ್ಥೆಯ ನಿರ್ದೇಶಕರಾದ ಸಿ.ವಿ. ಪ್ರಕಾಶ್ ಅವರ ಮೊಬೈಲ್: 94806 00849, 94817 39830 ಅನ್ನೂ ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News