×
Ad

ಮಹಾರಾಣಿ ಕ್ಲಷ್ಟರ್ ವಿವಿ ಮೊದಲ ಕುಲಪತಿಯಾಗಿ ಡಾ.ಗೋಮತಿ ದೇವಿ ನೇಮಕ

Update: 2020-11-07 22:40 IST

ಬೆಂಗಳೂರು, ನ. 7: ಬೆಂಗಳೂರಿನ ಮಹಾರಾಣಿ ಕ್ಲಷ್ಟರ್ ವಿಶ್ವ ವಿದ್ಯಾಲಯದ ಮೊದಲ ಉಪಕುಲಪತಿಯನ್ನಾಗಿ ಬೆಂಗಳೂರು ವಿಶ್ವ ವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಡಾ.ಗೋಮತಿ ದೇವಿ ಎಲ್. ಅವರನ್ನು ನೇಮಕ ಮಾಡಿ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಮಹೇಶ್ ಆರ್. ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ ಮೂಲ ಗೋಮತಿ ದೇವಿ ಅವರು, ಮೈಸೂರು ವಿಶ್ವ ವಿದ್ಯಾಲಯದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಪದವಿ ಪಡೆದಿದ್ದು, ಬೆಂಗಳೂರಿನ ಐಐಎಸ್ಸಿಯಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ 1988ರಲ್ಲಿ ಪಿಎಚ್‍ಡಿ ಪಡೆದಿದ್ದಾರೆ. ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಇವರು, 1992ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ರೀಡರ್ ಆಗಿದ್ದರು. ಬಳಿಕ 2000ದಿಂದ ಫ್ರೊಪೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News