×
Ad

ಲೇಖಕ ಕೆ.ಆರ್.ಕೃಷ್ಣರಾಜು ನಿಧನ

Update: 2020-11-08 19:45 IST

ಬೆಂಗಳೂರು, ನ. 8: ಲೇಖಕ ಕೆ.ಆರ್.ಕೃಷ್ಣರಾಜು(72) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಹುಭಾಷಾ ಪರಿಣಿತರಾಗಿದ್ದ ಅವರು ಎಐಎಡಿಎಂಕೆ ಜತೆ ನಿಕಟ ಸಂಪರ್ಕ ಹೊಂದಿದ್ದರು. ಈ ನಡುವೆ ಅಮ್ಮನ ಸಾಧನೆಯ ಕ್ರಾಂತಿ ಎಂಬ ಪುಸ್ತಕವನ್ನು ಕನ್ನಡ ಮತ್ತು ತಮಿಳಿನಲ್ಲಿ ಬರೆದಿದ್ದು, ಇದು ತೆಲುಗು, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ.

ಇಷ್ಟೇ ಅಲ್ಲದೆ, ಎಂಜಿಆರ್ ಎಂಬ ಮತ್ತೊಂದು ಪುಸ್ತಕವನ್ನೂ ಕನ್ನಡದಲ್ಲಿ ಬರೆದಿದ್ದರು. ಅವರ ಹೆಸರಿನಲ್ಲಿ ಕನ್ನಡ ಪ್ರಶಸ್ತಿಯನ್ನು ಕೂಡ ನೀಡುತ್ತಿದ್ದರು. ಅಖಿಲ ಭಾರತ ಅಣ್ಣಾ ಡಿಎಂಕೆ ಪಕ್ಷದ ಪ್ರದಾನ ಕಾರ್ಯದರ್ಶಿಗಳಾಗಿದ್ದರು.

ಜೊತೆಗ ಶಾಸಕ ಸ್ಥಾನಕ್ಕೆ ಸ್ಥಾನಕ್ಕೆ ಹಾಗೂ ಬೆಂಗಳೂರಿನ ಬಿಬಿಎಂಪಿ ಕೌನ್ಸಿಲರ್ ಸ್ಥಾನಗಳಿಗೆ ಚುನಾವಣೆಗಳಲ್ಲೂ ಹಲವು ಬಾರಿ ಸ್ಪರ್ಧಿಸಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News