ಬೆಂಗಳೂರು ವಿವಿ ಸ್ನಾತಕೋತ್ತರ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

Update: 2020-11-08 14:17 GMT

ಬೆಂಗಳೂರು, ನ. 8: ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿಯ ಸ್ನಾತಕೋತ್ತರ ಕೇಂದ್ರ, ರಾಮನಗರ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ 2020-21ನೆ ಸಾಲಿನ ಸ್ನಾತಕೋತ್ತರ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜ್ಞಾನಭಾರತಿ ಆವರಣ: ಕಲಾವಿಭಾಗದಲ್ಲಿ ಎಂಎ-ಅರ್ಥಶಾಸ್ತ್ರ, ಆಂಗ್ಲ, ಹಿಂದಿ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಂವಹನ, ಕನ್ನಡ, ತೌಲನಿಕ ಕನ್ನಡ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಗ್ರಾಮೀಣಾಭಿವೃದ್ದಿ ಅಧ್ಯಯನ, ಸಂಸ್ಕೃತ, ಸಮಾಜಶಾಸ್ತ್ರ, ತೆಲುಗು, ಉರ್ದು, ಮಹಿಳಾ ಅಧ್ಯಯನ, ಪ್ರದರ್ಶನ ಕಲಾ, ನೃತ್ಯ, ನಾಟಕ, ಸಂಗೀತ, ಎಂಎಸ್‍ಡಬ್ಲ್ಯು ಮತ್ತು ದೃಶ್ಯಕಲೆ. ಇದರ ಜೊತೆಗೆ ಎಂಎ ಅಪರಾಧ ಶಾಸ್ತ್ರ, ಮಾಧ್ಯಮ ಅಧ್ಯಯನ ಹಾಗೂ ಸಾರ್ವಜನಿಕ ಸಂಪರ್ಕ ಮತ್ತು ಜಾಹೀರಾತು ಕೋರ್ಸ್‍ಗಳಿವೆ.

ವಿಜ್ಞಾನ ವಿಭಾಗದಲ್ಲಿ: ಎಂಎಸ್ಸಿ ಅನ್ವಯಿಕ ತಳಿಶಾಸ್ತ್ರ, ಭೂಗರ್ಭ ಶಾಸ್ತ್ರ, ಜೀವರಸಾಯನಶಾಸ್ತ್ರ, ಜೀವತಂತ್ರಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಮಾಧ್ಯಮ, ವಿದ್ಯುನ್ಮಾನ ವಿಜ್ಞಾನ, ಪರಿಸರ ವಿಜ್ಞಾನ, ಫ್ಯಾಷನ್ ಅಂಡ್ ಅಪೆರಲ್ ಡಿಸೈನ್, ಭೂಗೋಳಶಾಸ್ತ್ರ, ಯೋಗ ವಿಜ್ಞಾನ, ಜೀವ ವಿಜ್ಞಾನ, ಗಣಿತ ಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ, ಭೌತಶಾಸ್ತ್ರ, ಮನಃಶಾಸ್ತ್ರ, ಪ್ರಾಣಿಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಹಾಗೂ ವಾಣಿಜ್ಯ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸ್ವಂತ ಹಣದ ಕೋರ್ಸ್‍ಗಳಾದ ಎಂಎಸ್ಸಿ ಫಿಲಂ ಮೇಕಿಂಗ್, ವಿಧಿ ವಿಜ್ಞಾನ, ಗ್ರಾಫಿಕ್ಸ್ ಮತ್ತು ಅನಿಮೇಷನ್ ಮತ್ತಿತರ ಕೋರ್ಸ್‍ಗಳಿವೆ. ವಾಣಿಜ್ಯ ವಿಭಾಗದಲ್ಲಿ: ಎಂಕಾಂ ಹಾಗೂ ಸ್ವಂತ ಹಣದ ಕೋರ್ಸ್‍ಗಳಾದ ಎಂಕಾಂ(ಎಫ್‍ಎ) ಹಾಗೂ ಎಂಟಿಟಿಎಂ ಕೋರ್ಸ್‍ಗಳಿವೆ.

ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಎಂಎ-ಕನ್ನಡ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಗ್ರಾಮೀಣಾವೃದ್ದಿ ಅಧ್ಯಯನ, ಅರ್ಥಶಾಸ್ತ್ರ, ಎಂಎಸ್‍ಡಬ್ಲ್ಯು(ಸಮಾಜಕಾರ್ಯ), ಎಂಎಸ್ಸಿ(ಗಣಿತಶಾಸ್ತ್ರ) ಮತ್ತು ಎಂಕಾಂ ಕೋರ್ಸ್‍ಗಳಿವೆ.

ಪ್ರತಿಯೊಂದು ಸ್ನಾತಕೋತ್ತರ ಕೋರ್ಸ್‍ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆ, ಕೋರ್ಸ್‍ಗಳ ಶುಲ್ಕದ ಮಾಹಿತಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ಅಂತರ್ ಜಾಲ www.bangaloreuniversity.ac.in ನಲ್ಲಿ ನೋಡಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News