ಹೀಗಿರಲಿದೆ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಥಮ ಹಿಂದು ದೇವಾಲಯ

Update: 2020-11-10 08:59 GMT

ಅಬುಧಾಬಿ: ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಥಮ ಹಿಂದು ದೇವಾಲಯ ಅಂತಿಮ ರೂಪ ಪಡೆದಾಗ ಹೇಗಿರಲಿದೆ ಎಂದು ತಿಳಿಯುವಂತಾಗಲು ದೇವಳದ ಅಂತಿಮ ವಿನ್ಯಾಸದ ಚಿತ್ರಗಳನ್ನು ಆಡಳಿತ ಮಂಡಳಿ- ಬಿಎಪಿಎಸ್ ಹಿಂದು ಮಂದಿರ್ ಬಿಡುಗಡೆಗೊಳಿಸಿದೆ.

ಈ ಕುರಿತಾದ ವೀಡಿಯೋವೊಂದು ದೇವಳ ನಿರ್ಮಾಣದ ಆರಂಭದಿಂದ ಹಿಡಿದು ಪ್ರಸಕ್ತ ನಿರ್ಮಾಣ ಹಂತದ ತನಕದ ಚಿತ್ರಣವನ್ನು ನೀಡುತ್ತದೆ.

ಅಬುಧಾಬಿಯ ಅಬು ಮುರೇಖಾಹ್ ಪ್ರದೇಶದಲ್ಲಿ ತಲೆಯೆತ್ತುತ್ತಿರುವ ಈ ದೇವಸ್ಥಾನದ ಎದುರುಗಡೆ ದೊಡ್ಡ ಸಭಾಂಗಣವಿರಲಿದ್ದು ಜತೆಗೆ ಅಲ್ಲಿ ಗ್ರಂಥಾಲಯ, ಮಜ್ಲಿಸ್ ಹಾಗೂ ಸಮುದಾಯ ಕೇಂದ್ರವೂ ಇರಲಿದೆ. ದೇವಳದ ಪ್ರವೇಶದ್ವಾರದ ಮೆಟ್ಟಿಲುಗಳ ಸುತ್ತ ನೀರಿನ ಝರಿ ಹಾಗೂ ದೇವಳ ಕಾಂಪ್ಲೆಕ್ಸ್ ಸುತ್ತಲೂ ಕೊಳಗಳಿವೆ.

ರಾಜಸ್ಥಾನ ಹಾಗೂ ಗುಜರಾತ್ ರಾಜ್ಯದ ಕುಶಲಕರ್ಮಿಗಳು ಈ ದೇವಳಕ್ಕಾಗಿ ಆಕರ್ಷಕ ಕಲ್ಲಿನ ಕೆತ್ತನೆ ನಡೆಸಿದ್ದಾರೆ.

ಹಿಂದು ಧರ್ಮಗ್ರಂಥಗಳು, ಭಾರತದ ಪೌರಾಣಿಕ ಪ್ರಸಂಗಗಳನ್ನಾಧರಿಸಿದ ಕೆತ್ತನೆಗಳಿಂದ ಈ  ಅಬುಧಾಬಿಯ ಹಿಂದು ದೇವಳ ಕಂಗೊಳಿಸಲಿದೆ.

Photos: gulfnews.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News