'ನೋಟು ಅಮಾನ್ಯೀಕರಣದ ವರ್ಷಾಚರಣೆ ಬಾಧಿತರಾದವರ ಗೋರಿಗಳ ಮೇಲೆ ಕೇಕ್ ಕತ್ತರಿಸಿದಂತೆ'

Update: 2020-11-10 14:27 GMT

ಮುಂಬೈ : ನೋಟು ಅಮಾನ್ಯೀಕರಣದ ನಾಲ್ಕನೇ ವರ್ಷಾಚರಣೆ ನಡೆಸುವುದು  ಈ  ಕ್ರಮದ ಪರಿಣಾಮವಾಗಿ ಆತ್ಮಹತ್ಯೆ ಮಾಡಿಕೊಂಡವರ ಹಾಗೂ ಉದ್ಯಮಗಳನ್ನು ಕಳೆದುಕೊಂಡವರ ಗೋರಿಗಳ ಮೇಲೆ ಹುಟ್ಟುಹಬ್ಬದ ಕೇಕ್ ಕತ್ತರಿಸಿದಂತೆ ಎಂದು ಶಿವಸೇನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ 2016ರ ಅಮಾನ್ಯೀಕರಣ ಕ್ರಮವನ್ನು ಭಾರತದ ಇತಿಹಾಸದ ಕರಾಳ ಅಧ್ಯಾಯವೆಂದು ಶಿವಸೇನೆ ತನ್ನ ಮುಖವಾಣಿ `ಸಾಮ್ನಾ'ದಲ್ಲಿ ಬಣ್ಣಿಸಿದೆ.

``ಆ (ಅಮಾನ್ಯೀಕರಣ) ನಿರ್ಧಾರದಿಂದಾಗಿ ಹಲವರು ಸಾವನ್ನು ಅಪ್ಪಿಕೊಂಡರು, ಉದ್ಯೋಗಗಳನ್ನು ಕಳೆದುಕೊಂಡರು,  ಆತ್ಮಹತ್ಯೆ ಮಾಡಿಕೊಂಡರು ಹಾಗೂ ಉದ್ದಿಮೆಗಳು ನಾಶವಾದವು. ಅದರ ವರ್ಷಾಚರಣೆ ಇಂತಹ ಜನರ ಗೋರಿಗಳ ಮೇಲೆ ಕುಳಿತು ಹುಟ್ಟುಹಬ್ಬದ ಕೇಕ್ ಕತ್ತರಿಸಿದಂತೆ,'' ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.

ಅಮಾನ್ಯೀಕರಣದಿಂದಾಗಿ ಕಪ್ಪು ಹಣ ಕಡಿಮೆಯಾಗಿದೆ ಹಾಗೂ ಆರ್ಥಿಕತೆಯಲ್ಲಿ ಪಾರದರ್ಶಕತೆ ಹೆಚ್ಚಾಗಿದೆ ಎಂದು ಅಮಾನ್ಯೀಕರಣದ ನಾಲ್ಕನೇ ವರ್ಷಾಚರಣೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ಶಿವಸೇನೆ ಮೇಲಿನಂತೆ ತಿರುಗೇಟು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News