ಅಮೆರಿಕ ಮೂಲ ದಾರಿಗೆ ಮರಳುತ್ತದೆ: ಬೈಡನ್

Update: 2020-11-11 15:37 GMT

ವಾಶಿಂಗ್ಟನ್, ನ. 11: ಅಮೆರಿಕ ತನ್ನ ಮೂಲ ದಾರಿಗೆ ಮರಳುತ್ತದೆ ಹಾಗೂ ನಾವು ಮತ್ತೆ ಜಗತ್ತಿನ ವ್ಯವಹಾರಗಳಲ್ಲಿ ಭಾಗಿಯಾಗುತ್ತೇವೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಹೇಳಿದ್ದಾರೆ.

ತನ್ನ ತವರು ನಗರ ಡೆಲಾವೆರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೆಳಿದರು.

ಇದಕ್ಕೂ ಮುನ್ನ ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್, ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಮತ್ತು ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಅಮೆರಿಕದ ನಿಯೋಜಿತ ಅಧ್ಯಕ್ಷರಿಗೆ ಫೋನ್ ಕರೆ ಮಾಡಿ ಅಭಿನಂದಿಸಿದರು.

ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸುವುದು ಮತ್ತು ಹವಾಮಾನ ಬದಲಾವಣೆಯನ್ನು ನಿಲ್ಲಿಸುವ ವಿಚಾರದಲ್ಲಿ ಯುರೋಪಿಯನ್ ದೇಶಗಳೊಂದಿಗೆ ಜೊತೆಯಾಗಿ ಕೆಲಸ ಮಾಡುವ ಇಂಗಿತವನ್ನು ಬೈಡನ್ ಹೊಂದಿದ್ದಾರೆ ಎಂದು ಅವರ ಪ್ರಚಾರ ತಂಡ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News