ಮಾದಕ ವಸ್ತು ಮಾರಾಟ: ಆರೋಪಿಗಳ ಬಂಧನ, 23.8 ಲಕ್ಷ ರೂ. ಮೌಲ್ಯದ ಸೊತ್ತು ವಶ
Update: 2020-11-14 23:00 IST
ಬೆಂಗಳೂರು, ನ.14: ಮಾದಕ ವಸ್ತು ಗಾಂಜಾ ಮತ್ತು ಡ್ರಗ್ಸ್ ಚಾಕೋಲೆಟ್ ಮಾರಾಟ ಮಾಡುತ್ತಿದ್ದ ಆರೋಪದಡಿ ಹಲವರನ್ನು ಮೈಕೋ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆಯುಷ್ ಪಾಂಡೆ, ರೋಹಿತ್ ರಾಂ, ನೂರ್ ಅಲಿ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಮಾದಕ ಪದಾರ್ಥ ಸರಬರಾಜು ಮಾಡಲು ಸಿದ್ಧತೆ ಮಾಡಿದ್ದರು ಎನ್ನಲಾಗಿದೆ. ಬಂಧಿತರಿಂದ ಚರಸ್ 4 ಕೆಜಿ 330 ಗ್ರಾಂ, ಮ್ಯಾಂಗೋ ಗಾಂಜಾ 170 ಗ್ರಾಂ, ಹ್ಯಾಶ್ ಆಯಿಲ್ 120 ಗ್ರಾಂ ಸೇರಿದಂತೆ ಒಟ್ಟು 23 ಲಕ್ಷ 80 ಸಾವಿರ ರೂ. ಬೆಲೆಬಾಳುವ ಮಾದಕ ವಸ್ತು, ಕೃತ್ಯಕ್ಕೆ ಬಳಸಿದ್ದ 2 ಬೈಕ್, 3 ಮೊಬೈಲ್‍ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.