ವೆಲ್ಫೇರ್ ಪಾರ್ಟಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Update: 2020-11-15 16:17 GMT

ಬೆಂಗಳೂರು, ನ. 15: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ಆನ್ ಆನ್‍ಲೈನ್ ಸದಸ್ಯತ್ವ ಅಭಿಯಾನವನ್ನು ಪಕ್ಷದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಕಲ್ಯಾಣ ಭಾರತದ ವಾಗ್ದಾನದೊಂದಿಗೆ ಆರಂಭವಾದ ಮೌಲ್ಯಾಧಾರಿತ ರಾಜಕೀಯ ಪಕ್ಷ ಇದಾಗಿದೆ. ನಮ್ಮ ದೇಶದಲ್ಲಿ ಸುಮಾರು 2,300 ನೋಂದಾಯಿತ ರಾಜಕೀಯ ಪಕ್ಷಗಳಿವೆ. ಕೆಲವು ಪಕ್ಷಗಳು ಜಾತಿ ಆಧಾರಿತವಾದರೆ, ಕೆಲವು ಕೋಮು ಆಧಾರಿತ ಪಕ್ಷಗಳಾಗಿದ್ದು, ಇನ್ನೊಂದಷ್ಟು ಕುಟುಂಬ ಆಧಾರಿತವಾಗಿವೆ ಎಂದು ಅಪಾದಿಸಿದರು.

ಇಂದಿನ ರಾಜಕೀಯ ಪಕ್ಷಗಳಿಗೆ ದೇಶದ ಅಭಿವೃದ್ಧಿ ಮುಖ್ಯವಾಗಿರಲಿಲ್ಲ. ಸ್ವಾತಂತ್ರ್ಯ ಪಡೆದು ಏಳು ದಶಕಗಳು ಕಳೆದರೂ ನಮ್ಮ ದೇಶದಲ್ಲಿ ಬಡತನ, ನಿರುದ್ಯೋಗ, ಕೆಳವರ್ಗದವರ ಮೇಲೆ ದೌರ್ಜನ್ಯ ಹೀಗೆ ಹಲವು ಸಮಸೆಗಳು ಇನ್ನು ಕಾಡುತ್ತಿವೆ, ಕೇವಲ ಕೈ ಬದಲಾವಣೆ ಆಗಿದೆ ಹೊರತು ಆಡಳಿತ ಶೈಲಿಯಲ್ಲಿ ಬದಲಾವಣೆ ಕಂಡಿಲ್ಲ ಎಂದು ದೂರಿದರು.

ಜನಸಾಮಾನ್ಯರಿಗೆ ರಾಜಕೀಯ ಪಕ್ಷಗಳೆಂದರೆ ಅಸಹ್ಯ ಹುಟ್ಟಿಸಿದೆ. ಇಂತಹ ಸಂಧರ್ಭದಲ್ಲಿ, ರಾಜಕೀಯದಲ್ಲಿ ಮೌಲ್ಯದೊಂದಿಗೆ ದೇಶದ ಆರು ಸಾವಿರ ಗ್ರಾಮಗಳನ್ನು ಕಲ್ಯಾಣ ಗ್ರಾಮ ಮಾಡುವ ಕನಸಿನೊಂದಿಗೆ ಹುಟ್ಟಿಕೊಂಡ ಪಕ್ಷವಾಗಿದೆ ಪಿಎಫ್‍ಐ ಹುಟ್ಟಿಕೊಂಡಿದೆ. ಈಗಾಗಲೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೆಲ್ಫೇರ್ ಪಕ್ಷದಿಂದ ಆರಿಸಿ ಬಂದಿರುವ ಸದಸ್ಯರು ತಮ್ಮ ವಾರ್ಡ್‍ಗಳನ್ನು ಮಾದರಿ ವಾರ್ಡನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News