ಸರಕಾರ ಜಾತಿಗೊಂದು ಪ್ರಾಧಿಕಾರ ರಚನೆ ಮಾಡಲಿ: ರಾಮಲಿಂಗಾರೆಡ್ಡಿ

Update: 2020-11-17 17:34 GMT

ಬೆಂಗಳೂರು, ನ.17: ರಾಜ್ಯ ಸರಕಾರ ಜಾತಿಗೊಂದು ಪ್ರಾಧಿಕಾರ ರಚನೆ ಮಾಡಲಿ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳಿಗೂ ಪ್ರಾಧಿಕಾರ ಮಾಡಿ ಬಿಡಲಿ. ಕೆಲವರಿಗೆ ಮಾಡಿ, ಕೆಲವರಿಗೆ ಮಾಡದಿದ್ದರೆ ತಪ್ಪಾಗುತ್ತದೆ. ಎಲ್ಲ ಸಮುದಾಯಗಳಿಗೂ ಮಾಡಲಿ ಎಂದರು.

ಅಲ್ಲದೆ, ಚುನಾವಣೆ ವೇಳೆ ಮಾಡಿದರೆ ರಾಜಕೀಯ ಪ್ರೇರಿತವಾಗುತ್ತದೆ. ಸರಕಾರ ಈ ಬಗ್ಗೆ ತೀರ್ಮಾನ ಮಾಡಲಿ ಎಂದ ಅವರು, ಎಲ್ಲರಿಗೂ ಒಂದೇ ರೀತಿಯ ನ್ಯಾಯ ಸಿಗಬೇಕು. ನಮ್ಮ ಸಮುದಾಯಕ್ಕೂ ನಿಗಮ ಮಾಡುವಂತೆ ಹಿಂದಿನ ಸರಕಾರದಲ್ಲಿ ಒತ್ತಾಯ ಮಾಡಲಾಗಿತ್ತು. ಈಗಲೂ ನಮ್ಮ ಒತ್ತಾಯವಿದೆ ಎಂದರು

ಡಿಜೆ-ಕೆಜಿ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗಿದೆ. ಮಾಜಿ ಮೇಯರ್ ಸಂಪತ್ ರಾಜ್ ತಲೆಮರೆಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಸರಿ ತಪ್ಪು ನ್ಯಾಯಾಲಯ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News